ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜನರನ್ನು ರಂಜಿಸಿದ ಕಲಾವಿದ ಡಾ‌.ಅಕ್ತರ್ ಹುಸೈನ್‌‌ ರ ಏಕವ್ಯಕ್ತಿ ಕಲಾ ಪ್ರದರ್ಶನ

ಬೆಂಗಳೂರು : ಮಂಗಳೂರು ಮೂಲದ ಕಲಾವಿದ ಡಾ. ಅಖ್ತರ್ ಹುಸೈನ್ ಅವರ ಏಕವ್ಯಕ್ತಿ ಕಲಾ ಪ್ರದರ್ಶನ “Vedic Inspirations” ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಉದ್ಘಾಟನೆಗೊಂಡಿತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಚಲನಚಿತ್ರ ನಟಿ ರಮ್ಯಾ ಉದ್ಘಾಟಿಸಿದರು.

ಡಾ. ಅಖ್ತರ್ ಹುಸೈನ್‌ರ ಈ ಏಕವ್ಯಕ್ತಿ ಪ್ರದರ್ಶನದಲ್ಲಿ ತಮ್ಮ ಇತ್ತೀಚಿನ ಕಲಾಕೃತಿಗಳನ್ನು ಪ್ರದರ್ಶಿಸಿದರು. ಈ ಮೂಲಕ ಪಾರಂಪರಿಕ ವೈದಿಕ ವಿಷಯಗಳನ್ನು ಆಧುನಿಕ ಕಲಾ ಅಭಿವ್ಯಕ್ತಿಯೊಂದಿಗೆ ಸಮನ್ವಯಗೊಳಿಸಿರುವ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿದರು. ಕಲಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಡಾ. ಹುಸೈನ್ ಅವರ ಸೃಜನಾತ್ಮಕ ದೃಷ್ಟಿಕೋನದ ಮೂಲಕ ಕಲೆಯನ್ನು ಆಸ್ವಾದಿಸಿದರು.

Edited By :
PublicNext

PublicNext

21/03/2026 01:05 pm

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ