ಮೊಳಕಾಲ್ಮೂರು:-ತಾಲೂಕಿನ ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋನಾಪುರದಲ್ಲಿ ಗುರುವಾರ ಶ್ರೀ ಹಿರೇಬೊಮ್ಮಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಮಾರಮ್ಮ ದೇವಿಗಂಗಾ ಪೂಜೆಯನ್ನು ನಾನಾ ಧಾರ್ಮಿಕ ಆಚರಣೆಗಳ ಮೂಲಕ ಚಾಲನೆ ನೀಡಲಾಯಿತು.
ಕೂಡ್ಲಿಗಿ ತಾಲೂಕಿನ ಮಾರಮ್ಮನಹಳ್ಳಿಯಿಂದ ಕಳೆದ 40 ವರ್ಷಗಳ ನಂತರ ಬೊಮ್ಮಲಿಂಗೇಶ್ವರ ಸ್ವಾಮಿ ದೇವರ ಎತ್ತುಗಳು ಬುಧವಾರ ಬೆಳಗಿನಜಾನ ಹೊರಟು ರಾತ್ರಿ ತಾಲೂಕಿನ ಮಲ್ಲೇಹರವಿ ಗ್ರಾಮದ ಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ತಂಗಿದ್ದು, ಗುರುವಾರ ಕೋನಾಪುರ ಗ್ರಾಮದ ಹಿರೇಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದವು.
ಗುರುವಾರ ಬೆಳಿಗ್ಗೆ ಈ ದೇವರ ಎತ್ತುಗಳ ವಿಜೃಂಭಣೆಯ ಮೆರವಣಿಗೆ ಮೂಲಕ ಬೊಮ್ಮಲಿಂಗೇಶ್ವರ ಸ್ವಾಮಿ ದೇವರನ್ನು ಗಂಗಮ್ಮನಹಳ್ಳಿಕ್ಕೆ ಕರೆದೊಯ್ದು ನಾನಾ ಬುಡಕಟ್ಟು ಸಂಪ್ರದಾಯದ ಧಾರ್ಮಿಕ ಆಚರಣೆಗಳ ಮೂಲಕ ಪೂಜೆ ಸಲ್ಲಿಸಿ ಸಂಜೆ ಕೋನಾಪುರಕ್ಕೆ ವಾಪಾಸು ಕರೆತರಲಾಯಿತು.
ತಾಲೂಕಿನ ನಾಗಸಮುದ್ರ, ಮೇಗಳ ಕಣಿವೆ, ಬೊಮ್ಮದೇವರಹಳ್ಳಿ, ಕೆಳಗಿನಕಣಿವೆ. ಆಂಧ್ರಾದ ಮಡೇನಹಳ್ಳಿ, ಕಲ್ಲೆಂ ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ ಸ್ವಾಮಿಗೆ ರುದ್ರಾಭಿಷೇಕ ಕೈಗೊಂಡು ಆನಂತರ ಭಜನಾ ಕಾರ್ಯಕ್ರಮ ನಡೆಸಿದರು.
Kshetra Samachara
05/03/2026 03:26 pm
LOADING...