ತಮಿಳುನಾಡು: ಮಿನಿ ಟೆಂಪೋ, ಬೈಕ್ ಮತ್ತು ತಮಿಳುನಾಡು ಸರ್ಕಾರಿ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸೇಲಂ ಬಳಿ ನಡೆದಿದೆ.
ತಮಿಳುನಾಡು ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್ ಮತ್ತು ಮಿನಿ ಟೆಂಪೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿ ಸಾಗುತ್ತಿದ್ದ ಮಣಿಕಂಠನ್ ಮತ್ತು ಅವರ ತಾಯಿ ಇರುಸಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮಿನಿ ಟೆಂಪೋದಲ್ಲಿದ್ದ 11 ತಿಂಗಳ ಮಗು ಜೀವಿಕಾ, 5 ವರ್ಷದ ನಿಧಿಷ್ಕಾ ಹಾಗೂ ಎರಡು ತಿಂಗಳ ಗರ್ಭಿಣಿ ಸತ್ಯಾ ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿನಿ ಟೆಂಪೋದಲ್ಲಿದ್ದವರು ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಕಾರಣನಾದ ಸರ್ಕಾರಿ ಬಸ್ ಚಾಲಕ ಮೆಟ್ಟೂರಿನ ಅಯ್ಯಂ ದೊರೈ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೇಲಂ ಜಿಲ್ಲಾಧಿಕಾರಿ ಬೃಂದಾ ದೇವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸೇಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 11:07 pm
LOADING...