ಶಿವಮೊಗ್ಗ : ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಶಿಕ್ಷಣ ಇಲಾಖೆಯು ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಒಂದನೇ ತರಗತಿ ಸೇರ್ಪಡೆಗೆ ನಿಗದಿಪಡಿಸಲಾಗಿದ್ದ ಆರು ವರ್ಷದ ಕಡ್ಡಾಯ ವಯೋಮಿತಿಯಲ್ಲಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸರ್ಕಾರವು ಈಗ 60 ದಿನಗಳ ವಿನಾಯಿತಿಯನ್ನು ಘೋಷಿಸಿದೆ. ಇದರಿಂದಾಗಿ ವಯಸ್ಸಿನ ಮಿತಿಯಿಂದಾಗಿ ಅಡ್ಮಿಷನ್ ಪಡೆಯಲು ಪರದಾಡುತ್ತಿದ್ದ ಸಾವಿರಾರು ಪೋಷಕರಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಂತಾಗಿದೆ.
ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಶಿಕ್ಷಣ ಕಾಯ್ದೆ 1993ರ ನಿಯಮಗಳ ಅನ್ವಯ, 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ದಾಖಲಾತಿಗಾಗಿ ಮಕ್ಕಳಿಗೆ 60 ದಿನಗಳ ಕಾಲ ವಯೋಮಿತಿ ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ದಾಖಲಾತಿ ತಂತ್ರಾಂಶದಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದರು.
ಕೇವಲ ಒಂದನೇ ತರಗತಿ ಮಾತ್ರವಲ್ಲದೇ, ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳ ದಾಖಲಾತಿಯಲ್ಲೂ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಸ್ತುತ ಎಲ್‌ಕೆಜಿ ಮತ್ತು ಯುಕೆಜಿ ಹಂತದಲ್ಲಿ ಯಾವುದೇ ಶಿಸ್ತುಬದ್ಧ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ, ಖಾಸಗಿ ಶಾಲೆಗಳು ಪೋಷಕರಲ್ಲಿ ಗೊಂದಲ ಮೂಡಿಸುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ಅಥವಾ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದರು.
PublicNext
26/03/2026 05:23 pm
LOADING...