ಹಾವೇರಿ : ದಾವಣಗೆರೆ ಉಪಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಅವರ ಪರವಾಗಿ ಶ್ರೀಶೈಲ ಜಗದ್ಗುರುಗಳು ಬ್ಯಾಟ್ ಬೀಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮಾತನಾಡಿದ ಜಗದ್ಗುರುಗಳು, ಸಮರ್ಥ ಅವರಿಗೆ ಬೆಂಬಲ ನೀಡುವಂತೆ ಸಮಾಜಕ್ಕೆ ಕರೆ ನೀಡಿದರು.
ಸಮುದಾಯದ ಅಭ್ಯರ್ಥಿಗೆ ಆದ್ಯ ಕರ್ತವ್ಯ
ಸಮಾಜದ ಯಾವುದೇ ವ್ಯಕ್ತಿ ಯಾವುದೇ ಪಕ್ಷದಿಂದ ಸ್ಪರ್ಧಿಸಲಿ, ಅವರನ್ನು ಬೆಂಬಲಿಸುವುದು ಸಮಾಜದವರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಶಾಮನೂರು ಶಿವಶಂಕರಪ್ಪ ಅವರು ಸಮಾಜದ ಒಗ್ಗಟ್ಟಿಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅಲ್ಲದೆ, ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸುದೀರ್ಘ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಅವರ ಮೊಮ್ಮಗ ಸಮರ್ಥ ಈಗ ಚುನಾವಣಾ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ, ಸಮಾಜದವರೆಲ್ಲರೂ ಸಮರ್ಥ ಅವರಿಗೆ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಶ್ರೀಶೈಲ ಜಗದ್ಗುರುಗಳು ಸಮಾಜದ ಜನರಿಗೆ ಮನವಿ ಮಾಡಿದರು.
PublicNext
27/03/2026 10:09 am
LOADING...