ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಅಪಘಾತಕ್ಕೆ ಚಾಲಕ‌ನ ನಿರ್ಲಕ್ಷ್ಯವೇ ಕಾರಣ

ಹಾವೇರಿ: ಹಾವೇರಿ ಬಸ್ ನಿಲ್ದಾಣದಲ್ಲಿನ ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹಾವೇರಿ ಸಾರಿಗೆ ಉಪವಿಭಾಗಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಸಾರಿಗೆ ಬಸ್ ಸುಸ್ಥಿತಿಯಲ್ಲಿತ್ತು ಎಂದು ತಿಳಿಸಿದರು.

ಬಸ್ ಚಾಲಕ ಮಂಜುನಾಥನ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ವಿಜಯಕುಮಾರ್ ತಿಳಿಸಿದರು. ನ್ಯಾಯಾಲಯದ ತೀರ್ಪು ಬಂದ ಮೇಲೆ ಚಾಲಕ

ಮಂಜುನಾಥನ ಅಮಾನತು ಮಾಡುವುದಾಗಿ ವಿಜಯಕುಮಾರ್ ತಿಳಿಸಿದರು.

ಸಾರಿಗೆ ಇಲಾಖೆಯ ನಿಯಮದಂತೆ ಮೃತ ಬಾಲಕನ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರ ವಿತರಣೆ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಮೇಲೆ ಮುಂದೆ ಪರಿಹಾರ ನೀಡುವುದಾಗಿ ವಿಜಯಕುಮಾರ್ ತಿಳಿಸಿದರು.

Edited By : Somashekar
PublicNext

PublicNext

02/04/2026 10:45 am

Cinque Terre

12.17 K

Cinque Terre

0

ಸಂಬಂಧಿತ ಸುದ್ದಿ