ಹಾವೇರಿ: ಡೆಪ್ಯುಟಿ ಸ್ಪೀಕರ್ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ ಸಾರಿಗೆ ಇಲಾಖೆಯ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹೊರಟಿದ್ದ ವೇಳೆ ಈ ಅಪಘಾತ ನಡೆದಿದೆ.
ಎಸ್ಕಾರ್ಟ್ ವಾಹನದ ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅತೀ ವೇಗದಿಂದ ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗಕ್ಕೆ ಮತ್ತು ಬಸ್ ನ ಹಿಂದಿನ ಭಾಗಕ್ಕೆ ಹಾನಿಯಾಗಿದೆ. ಬಸ್ KA-27 F0726 ಸಂಖ್ಯೆ ಬಸ್ ಗೆ ಹಿಂದಿನಿಂದ ವೇಗವಾಗಿ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದಿದೆ.
PublicNext
04/04/2026 01:10 pm
LOADING...