ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಿಲ್ದಾಣಕ್ಕೆ ನುಗ್ಗಿದ ಸಾರಿಗೆ ಬಸ್; ಚಿಕಿತ್ಸೆ ಫಲಿಸದೆ ಎರಡು ವರ್ಷದ ಮಗು ಸಾವು

​ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.

​ಸವಣೂರು ಪಟ್ಟಣದ ಹಜರತ್ ಅಲಿ (2 ವರ್ಷ) ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ ಹಾವೇರಿ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಸಾರಿಗೆ ಬಸ್ ಏಕಾಏಕಿ ನುಗ್ಗಿದ್ದರಿಂದ ಈ ಅಪಘಾತ ಸಂಭವಿಸಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಈ ದುರ್ಘಟನೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದರು. ಮಗು ಸಾವನ್ನಪ್ಪಿದ್ದು, ​ವಾಸುದೇವ (44), ​ಹರ್ಷಾ (6),

​ಕಾವ್ಯಾಂಜಲಿ (39) ಗಾಯಗೊಂಡಿದ್ದು,

​ಪ್ರಸ್ತುತ ಇವರೆಲ್ಲರಿಗೂ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲಿದ್ದ ಪ್ರಯಾಣಿಕರ ಮೇಲೆ ಬಸ್ ನುಗ್ಗಿದ ಈ ಘಟನೆಯಿಂದಾಗಿ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Edited By :
PublicNext

PublicNext

01/04/2026 04:34 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ