ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೆನೂರು ಗ್ರಾಮದಲ್ಲಿ ದುರಂತ ಘಟನೆಯೊಂದು ನಡೆದಿದೆ. ಯುಪಿಎಸ್ ಸಂಪರ್ಕದಿಂದ ವಿದ್ಯುತ್ ಸ್ಪರ್ಶಿಸಿ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತನನ್ನು ಅಭಿಷೇಕ ತೆವರಿ ಎಂದು ಗುರುತಿಸಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅಭಿಷೇಕ್, ಸಂಬಂಧಿಕರ ಮದುವೆ ನಿಮಿತ್ತ ಐದಾರು ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು.
ಹೊಸ ಮನೆಯಲ್ಲಿ ಫ್ಯಾನ್ ಜೋಡಿಸಲು ಹೋಗಿದ್ದ ಅಭಿಷೇಕ್, ಮುಖ್ಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ರಿಪೇರಿ ಮಾಡಲು ಮುಂದಾಗಿದ್ದರು. ಆದರೆ, ಯುಪಿಎಸ್ ಸಂಪರ್ಕ ಸಕ್ರಿಯವಾಗಿದ್ದ ಕಾರಣ, ಅಚಾನಕ್ ಆಗಿ ವಿದ್ಯುತ್ ಪ್ರವಹಿಸಿ ಅಭಿಷೇಕ್ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/04/2026 11:51 am
LOADING...