ಶಿಗ್ಗಾವಿ : ಶ್ರೀ ಸಾಯಿ ಮಂದಿರದಲ್ಲಿ ಶ್ರೀರಾಮನವಮಿ ಆಚರಿಸಲಾಯಿತು. ಶ್ರೀರಾಮ, ಮತ್ತು ಸಾಯಿಬಾಬಾ ಮೂರ್ತಿಗಳಿಗೆ ವಿಶೇಷವಾದ ಪೂಜೆ ಫಲ ಪುಷ್ಪಗಳ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯಿಂದಲೇ ಶ್ರೀ ಸಾಯಿ ಬಾಬಾ ಮೂರ್ತಿಗೆ ರುದ್ರಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಮಾಡಲಾಯಿತು. ನಂತರ ವಿವಿಧ ಆಭರಣ ವಸ್ತ್ರ ಮತ್ತು ಪುಷ್ಪಗಳಿಂದ ಸಿಂಗರಿಸಲಾಯಿತು.
ಮಧ್ಯಾಹ್ನ ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಲಾಯಿತು. ತೊಟ್ಟಿಲೋತ್ಸವ ಆಚರಿಸಲಾಯಿತು.ನಂತರ ಮುತ್ತೈದೆಯರಿಗೆ ಉಡಿ ತುಂಬ ಮೂಲಕ ವಿಶೇಷವಾಗಿತ್ತು ಸಂಭ್ರಮಿಸಿದರು. ವಿಶೇಷವಾಗಿ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು ನೂರಾರು ಭಕ್ತಾದಿಗಳು ಪ್ರಸಾದದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಶಿಧರ್ ಸುರಗಿಮಠ, ಬಸವರಾಜ್ ಹೆಸರೂರು, ವಿಶ್ವನಾಥ್ ವಾಲಿ ಶೆಟ್ಟರ್, ವಿ ಎಸ್ ಪಾಟೀಲ್, ಮಂಜುನಾಥ್ ಬಾಣದ, ನಾಗಯ್ಯಹಿರೇಮಠ, ಉಮೇಶ್ ಗೌಳಿ, ತೋಟಯ್ಯ ಕುಂಬಾರಗೇರಿಮಠ, ಗುರುನಾಥ ಅಣ್ಣಿಗೇರಿ, ನವೀನ್ ಸಾಸನೂರು, ವಿಶ್ವನಾಥ ಗಾಣಿಗೇರ, ಪ್ರಸಾದ್ ಹಿರೇಮಠ ಉಪಸ್ಥಿತರಿದ್ದರು
ವರದಿ - ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್ ಶಿಗ್ಗಾವಿ
PublicNext
27/03/2026 04:02 pm
LOADING...