ಮೈಸೂರು : ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಹುರುಳಿಗೆ ಸಿಲುಕಿ ಗಂಡು ಹುಲಿಯೊಂದು ಮೃತಪಟ್ಟ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಗಸನಹುಂಡಿಯಲ್ಲಿ ನಡೆದಿದೆ. ಗಿರೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ್ದ ಹುರುಳಿಗೆ ಸುಮಾರು 3 ವರ್ಷದ ಗಂಡು ಹುಲಿ ಸಿಲುಕಿಕೊಂಡು ಸಾವನ್ನಪ್ಪಿದೆ.
2-3 ದಿನಗಳ ಹಿಂದೆಯೇ ಹುಲಿ ಮೃತಪಟ್ಟಿದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ತಜ್ಞರ ತಂಡ ಹುಲಿ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಿ ಕಳೇಬರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಕಾಡು ಹಂದಿಗಳ ಬೇಟೆಗಾಗಿ ಜಮೀನಿನಲ್ಲಿ ಅಕ್ರಮವಾಗಿ ಹುರುಳು ಹಾಕಿರಬಹುದೆಂದು ಅಂದಾಜಿಸಲಾಗಿದ್ದು ತನಿಖೆ ನಂತರವಷ್ಟೇ ಸತ್ಯ ಸಂಗತಿ ಹೊರಬೀಳಬೇಕಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದ 2ನೇ ಗಸ್ತಿಗೆ ಸೇರಿದ ಜಮೀನಿನಲ್ಲಿ ಹುಲಿ ಮೃತಪಟ್ಟಿದೆ. ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ ಬಳಿಕ ಗಿರೀಶ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
28/03/2026 11:26 am
LOADING...