ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ಯಾಸ್ ಸಿಗದೆ ಆಟೋ ಚಾಲಕರ ರೋಷಾವೇಶ: ಮೈಸೂರಿನಲ್ಲಿ ರಸ್ತೆ ತಡೆ, ಪೊಲೀಸರೊಂದಿಗೆ ವಾಗ್ವಾದ!

ಮೈಸೂರು: ಗ್ಯಾಸ್ ಸಿಗದ ಸಿಟ್ಟು,ರಸ್ತೆ ಬಂದ್ ಮಾಡಲು ಆಟೋ ಚಾಲಕರು ಮುಂದಾಗಿದ್ದಾರೆ. ಬಂಕ್ ನಲ್ಲಿದ್ದ ಆಟೋವನ್ನ ನಡು ರಸ್ತೆಯಲ್ಲಿ ನಿಲ್ಲಿಸಿ ಚಾಲಕರು ಕಿಡಿ ಕಾರಿದ್ದಾರೆ. ಟ್ರಾಫಿಕ್ ಜಾಮ್ ಆಗ್ತಿದ್ದಂಗೆ ಸಂಚಾರಿ ಪೊಲೀಸರ ಎಂಟ್ರಿ ಆಗಿದ್ದು ಈ ವೇಳೆ ಆಟೋ ಚಾಲಕರು-ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಗ್ಯಾಸ್ ಗಾಗಿ ಗಂಟೆಗಟ್ಟಲೇ ಕಾದಿದ್ದ ಆಟೋ ಚಾಲಕರು ಕಡೆಗೆ ಗ್ಯಾಸ್ ಸ್ಟಾಕ್ ಇಲ್ಲ ಅಂತ ಬಂಕ್ ಸಿಬ್ಬಂದಿ ಹೇಳ್ತಾ ಇದ್ದ ಹಾಗೆ ರೊಚ್ಚಿಗೆದ್ದಿದ್ದಾರೆ.

ಎಲ್ಲಾ ಕಡೆ ಇದೇ ಹೇಳ್ತಾರೆ, ನಾವೇನ್ ಮಾಡೋಣ ಗ್ಯಾಸ್ ಇಲ್ಲಾಂದ್ರೆ ಆಟೋವನ್ನ ರಸ್ತೆಯಲ್ಲಿಯೇ ನಿಲ್ಲಿಸಬೇಕಷ್ಟೆ ಎಂದು ಸಿಟ್ಟಿನಿಂದ ನಡು ರಸ್ತೆಯಲ್ಲಿ ಆಟೋವನ್ನ ನಿಲ್ಲಿಸಿದ್ದಾರೆ.

Edited By :
PublicNext

PublicNext

05/04/2026 05:26 pm

Cinque Terre

12.37 K

Cinque Terre

0

ಸಂಬಂಧಿತ ಸುದ್ದಿ