ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಬಗ್ಗೆ ವಿದ್ಯಾರ್ಥಿಯೊಬ್ಬರು ಬೇಸರ ಹೊರ ಹಾಕಿದ್ದಾರೆ. 2024 ರಲ್ಲಿ ನಾನು ಬಿಕಾಂ ಮುಗಿಸಿದ್ದೇನೆ. ಇದೀಗ ಎಂಕಾಂ ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದೇನೆ. ಆದರೆ, ಇನ್ನೂ ಕೂಡ ಪದವಿ ಸರ್ಟಿಫಿಕೇಟ್ ಕೊಡೋಕೆ ಮೈಸೂರು ಯೂನಿವರ್ಸಿಟಿಗೆ ಆಗಿಲ್ಲ ಎಂದು ಅಲ್ಲಿಯ ಆಡಳಿತದ ವೈಖರಿ ಎಂದು ಕಿಡಿಕಾರಿದ್ದಾರೆ.
ಅಲ್ಲದೆ, ಇದೇ ವಿಚಾರವಾಗಿ ಮುಕ್ತ ವಿವಿಯ ಸಿಬ್ಬಂದಿ ಗೀತಾಂಜಲಿ ಎಂಬುವವರು ಯುವಕನ ವಿಡಿಯೋ ಶೇರ್ ಮಾಡಿ, ನನ್ನ ಮಗಳು ಪಿಜಿ ಮುಗಿಸಿದ್ದಾಳೆ. ಅವಳಿಗೆ ಇನ್ನೂ ಅಂಕ ಪಟ್ಟಿ ಸಿಕ್ಕಿಲ್ಲ, ಕೇಳಿದ್ರೆ 10 ಸಾವಿರ ಕೊಡಿ ಅಂತ ಕೇಳ್ತಾರೆ. ಕರ್ನಾಟಕದ ಎಲ್ಲಾ ಯೂನಿವರ್ಸಿಟಿಗಳು ಗುಜರಿ ಅಂಗಡಿಗಳಾಗಿವೆ. ಉನ್ನತ ಶಿಕ್ಷಣ ಸಚಿವರು ಮೋರಿ ಕ್ಲೀನ್ ಮಾಡೋಕು ಅರ್ಹತೆ ಇಲ್ಲ ಅಂತ ನಾಲಿಗೆ ಹರಿಬಿಟ್ಟಿದ್ದು, ಈ ಕುರಿತ ವಾಟ್ಸ್ ಅಪ್ ಚಾಟ್ ವೈರಲ್ ಆಗಿದೆ.
PublicNext
05/04/2026 05:03 pm
LOADING...