ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಹೊಸಹೊಳಲು ವಾತ್ಸಲ್ಯ ಮನೆ ಹಸ್ತಾಂತರ

ಮೈಸೂರು: ಇಲ್ಲಿನ ಎಚ್.ಡಿ.ಕೋಟೆಯ ಹೊಸಹೊಳಲಿನಲ್ಲಿ ರತ್ನಮ್ಮ ಪುಟ್ಟಯ್ಯ ಎಂಬವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯ ನಡೆಯಿತು.

ಗ್ರಾ.ಪಂ ಸದಸ್ಯ ಭೈರೆಗೌಡ್ರು ಮಾತನಾಡಿ, ಪಂಚಾಯಿತಿ ಮಾಡದ ಕಾರ್ಯವನ್ನು ಧರ್ಮಸ್ಥಳ ಯೋಜನೆಯಿಂದ ಮಾಡಲಾಗುತ್ತಿದೆ. ಸುಮಾರು 15 ವರ್ಷಗಳಿಂದ ರತ್ನಮ್ಮ ಪುಟ್ಟಯ್ಯರವರು ಮನೆ ಇಲ್ಲದೆ ಇದ್ದು, ಅವರಿಗೆ ಊರಿನಿಂದ ಹಾಗೂ ಪಂಚಾಯಿತಿ ಕಡೆಯಿಂದ ಯಾವುದೇ ಸಹಾಯವನ್ನು ಪಡೆಯದೇ ಯೋಜನೆಯವರು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೆ ಹೊಸಹೊಳಲು ಗ್ರಾಮಕ್ಕೆ ಕೆರೆ ಕಾಮಗಾರಿ ನಡೆಸಿದ್ದಾರೆ. ದೇವಸ್ಥಾನಗಳಿಗೆ ಹಾಗೂ ಹಾಲಿನ ಡೈರಿಗೆ ಅನುದಾನ ನೀಡಿರುತ್ತಾರೆ. ಇದೇ ರೀತಿ ಉತ್ತಮ ಕಾರ್ಯಗಳನ್ನು ಮಾಡಲಿ ಎಂದರು.

ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ್ ನಾಗನಳ್, ಯೋಜನಾಧಿಕಾರಿ ಭಾಸ್ಕರ್, ಗ್ರಾಮ ಪಂಚಾಯಿತಿ ಸದಸ್ಯ ಟಿ ಮಂಜು, ಊರಿನ ಮುಖಂಡರಾದ ಮಹಾದೇವ, ಪದ್ಮರಾಜು ಮತ್ತು ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

06/04/2026 05:25 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ