ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು ಕ್ಷೇತ್ರದಲ್ಲಿ ಎಗ್ಗಿಲ್ಲದೇ ಮರಳು ಮಾಫಿಯಾ!ರೈತರ ಆಕ್ರೋಶ, ಸರ್ಕಾರಕ್ಕೆ ಸವಾಲು!

ಮೊಳಕಾಲ್ಮೂರು: ಹೀಗೆ ಟಿಪ್ಪರ್ ಲಾರಿಗಳಲ್ಲಿ ಕೆಂಪು ಮಣ್ಣನ್ನ ಸಾಗಾಟ ಮಾಡ್ತಿರೋ ಪ್ರಭಾವಿಗಳು. ಅದೇ ಮಣ್ಣನ್ನ ನೀರಿನಲ್ಲಿ ವಾಶ್ ಮಾಡ್ತಿರೋ ಕಾರ್ಮಿಕರು. ಮಣ್ಣಿನಿಂದ ಮರಳು ಮಾಡಿ ಮೋಸ ಮಾಡ್ತಿರೋ ದಂಧೆಕೋರರು. ಈ ಸ್ಯಾಂಡ್ ಮಾಫಿಯಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ.

ಹೌದು... ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಮರಳು ಬ್ಲಾಕ್‌ಗಳಿಗೆ ಸರ್ಕಾರ ಅನುಮತಿ ನೀಡಿದೆ. ಪಟ್ಟಾ ಲ್ಯಾಂಡ್‌ಗಳಲ್ಲಿ ಮರಳು ತುಂಬಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರೋ ಪ್ರಭಾವಿಗಳು ಲೀಸ್ ಹೆಸರಲ್ಲಿ ಅಕ್ರಮ ಮರಳು ದಂಧೆಗಳಿಗೆ ಕೈಹಾಕಿದ್ದಾರೆ.

ಮಾಚೇನಹಳ್ಳಿ, ಅಶೋಕ ಸಿದ್ದಾಪುರ ಹಾಗೂ ನಾಗಸಮುದ್ರ ಬಳಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದೆ. ಮೂರು ಮರಳು ಬ್ಲಾಕ್ ಗಳು ಕೂಡಾ ಪ್ರಭಾವಿಗಳ ಹೆಸರಲ್ಲಿದ್ದು, ಕೋಟಿ ಕೋಟಿ ಸ್ಯಾಂಡ್ ದಂಧೆ ನಡೆಯುತ್ತಿದೆ. ಇನ್ನೂ ಮಾಚೇನಹಳ್ಳಿ ಬ್ಲಾಕ್ ನಲ್ಲಿ ಸಾಗಾಟಕ್ಕೆ ಮರಳೇ ಖಾಲಿಯಾಗಿದೆ.

ಮೋಟರ್ ಪಂಪ್ ಸೆಟ್‌ಗಳ ಮೂಲಕ ನೀರು ಬಿಟ್ಟು ಕೆಂಪು ಮಣ್ಣನ್ನ ವಾಶ್ ಮಾಡಿ ಮರಳು ಮಾಡ್ತಾರೆ. ಅಲ್ಲದೇ ಬೇರೆ ಭಾಗದಿಂದ ಮಣ್ಣನ್ನ ತಂದು ಇಲ್ಲಿ ಮರಳು ಮಾಡಿದ್ರೂ ಕೂಡಾ ಗಣಿ & ಭೂ ವಿಜ್ಞಾನ ಇಲಾಖೆ ಆಫಿಸರ್ಸ್ ಮಾತ್ರ ಕಣ್ಮಚ್ಚಿ ಕೂತಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ಕೇವಲ ಇಷ್ಟೇ ಅಲ್ಲದೇ ನಾಗಸಮುದ್ರ ಬ್ಲಾಕ್ ನಲ್ಲಂತೂ ಹೇಳೋರು ಕೇಳೋರು ಇಲ್ಲವಾಗಿದ್ದಾರೆ. ಬೃಹತ್ ಗಾತ್ರದ ಹೈಟೆನ್ಷನ್ ಕಂಬಕ್ಕೂ ದಂಧೆಕೋರರು ಲಗ್ಗೆ ಇಟ್ಟಿದ್ದು, ಪವರ್ ಲೈನ್ ಸುತ್ತಲೂ ಕೂಡಾ ಮರಳು ಎತ್ತಿದ್ದಾರೆ. ಇದ್ರಿಂದ ಯಾವಾಗ ಬೇಕಾದ್ರೂ ಹೈಟೆನ್ಷನ್ ಲೈನ್ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಇನ್ನೂ ಬ್ಲಾಕ್ ಓಪನ್ ಇಲ್ಲದಿದ್ರೂ ಕೂಡಾ ಮರಳು ಸಾಗಾಟಕ್ಕೆ ಅಧಿಕಾರಿಗಳು ಕುಮ್ಮಕ್ಕು ನೀಡ್ತಿದ್ದು, ಮರಳು ಕಳ್ಳ ಮಾರ್ಗದಲ್ಲಿ ಸಾಗಾಟ ಆಗೋದು ಕೂಡಾ ಪಕ್ಕಾ ಆಗಿದೆ. ದಪ್ಪ ಚರ್ಮದ ಅಧಿಕಾರಿಗಳು ಮಾತ್ರ ಕಣ್ಮಚ್ಚಿ ಕೂತಿದ್ದಾರೆ. ಸಿಂಗಲ್ ಪರ್ಮಿಟ್‌ನಲ್ಲೇ 2-3 ಲೋಡ್ ಮರಳು ಸಾಗಾಟ ಮಾಡ್ತಿದ್ದು, ಅಧಿಕಾರಿ ವರ್ಗಕ್ಕೆ ಮಂಥ್ಲಿ ಮಾಮೂಲು ಹೋಗುತ್ತೆ ಅನ್ನೋ ಆರೋಪ ಕೂಡಾ ಇದೇ.

ಚಿತ್ರದುರ್ಗ ಡಿಸಿ ಟಿ.ವೆಂಕಟೇಶ್ ಕೂಡಲೇ ಈ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಅನ್ನೋ ಭರವಸೆ ಕೊಟ್ಟಿದ್ದಾರೆ.

ಒಟ್ಟಾರೆ ಬರದನಾಡಲ್ಲಿ ಭೂಮಿಯ ಒಡಲು ಬಗೆದು ಕೋಟ್ಯಾಂತರ ಮೌಲ್ಯದ ಮರಳು ಲೂಟಿ ಮಾಡ್ತಿದ್ದಾರೆ. ಇದ್ರಿಂದ ಅಂತರ್ಜಲ ಮಟ್ಟ ಕೂಡಾ ಕುಸಿಯುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

Edited By :
PublicNext

PublicNext

28/03/2026 01:18 pm

Cinque Terre

10.1 K

Cinque Terre

0

ಸಂಬಂಧಿತ ಸುದ್ದಿ