ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗದಲ್ಲಿ ಆಕ್ಸಿಡೆಂಟ್ ಜೋನ್ ಆಯ್ತು ಶ್ರೀಕೃಷ್ಣ ಸರ್ಕಲ್

ಚಿತ್ರದುರ್ಗ: ಇದು ಕೋಟೆನಾಡು ಚಿತ್ರದುರ್ಗದ ಹೊಳಲ್ಕೆರೆ ರಸ್ತೆ. ಇದೇ ಮಾರ್ಗದ ಮೂಲಕ ಚಿತ್ರದುರ್ಗ -ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 369 ಹಾದು ಹೋಗುತ್ತದೆ. ಆದರೆ ಇದೇ ರಾಷ್ಟ್ರೀಯ ಹೆದ್ದಾರಿ ಇದೀಗ ವಾಹನ ಸವಾರರ ಪ್ರಾಣಕ್ಕೆ ಕುತ್ತು ತಂದೊಡ್ಡುತ್ತಿದೆ.

ಹೌದು.. ಚಿತ್ರದುರ್ಗ ನಗರದಿಂದ ಶಿವಮೊಗ್ಗ ಕಡೆ ಹೋಗುವ ಪ್ರಯಾಣಿಕರು ಇದೇ ಮಾರ್ಗದಲ್ಲೇ ಸಂಚರಿಸುತ್ತಾರೆ. ಅಲ್ಲದೆ ಮುರುಘಾ ಮಠದ ಕಡೆಯಿಂದಲೂ ಕೂಡಾ ವಾಹನಗಳು ಇದೇ ರಸ್ತೆ ಬಂದು ಸೇರುತ್ತಿದ್ದು, ಏಕಕಾಲಕ್ಕೆ ಎರಡು ಬದಿಯ ವಾಹನಗಳು ಒಂದೇ ಕಡೆ ಸೇರುತ್ತಿವೆ. ಹೊಳಲ್ಕೆರೆ ಕಡೆಯಿಂದ ಬರುವ ವಾಹನಗಳು ಕೂಡಾ ಇದೇ ಜಾಗದಲ್ಲೇ ಡೈವರ್ಟ್ ಆಗುವುದರಿಂದ ಕೃಷ್ಣ ಸರ್ಕಲ್ ಇದೀಗ ಆಕ್ಸಿಡೆಂಟ್ ಜೋನ್ ಆಗಿದೆ.

ಇನ್ನೂ ಹೈವೆ ಅಥಾರಿಟಿ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಮಾಡಿದ್ದು, ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರ ಪ್ರಯಾಣಕ್ಕೆ ಕಂಟಕವಾಗಿದೆ. ಇದೇ ಜಾಗದಲ್ಲಿ ಹತ್ತಾರು ಬಾರಿ ಆಕ್ಸಿಡೆಂಟ್ ಗಳು ಕೂಡಾ ನಡೆದಿದ್ದು, ಹಲವು ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೂ ಕೂಡಾ ಎನ್.ಎಚ್.ಐ ಅಧಿಕಾರಿಗಳು ಮಾತ್ರ ತಲೆ ಕೆಡಸಿಕೊಂಡಿಲ್ಲ. ಇದರಿಂದ ಇಲ್ಲಿ ರಸ್ತೆ ದಾಟಲು ಕೂಡಾ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಾ.ಓ೨: ಇನ್ನೂ ಇಷ್ಟೇ ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲೇ ಶ್ರೀಕೃಷ್ಣ ಸರ್ಕಲ್ ಕೂಡಾ ತಲೆ ಎತ್ತಿದೆ. ಇದು ಕೂಡಾ ಪ್ರಯಾಣಿಕರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಸರ್ಕಲ್ ವೃತ್ತಾಕಾರದಲ್ಲಿ ನಿರ್ಮಾಣವಾಗಿಲ್ಲ, ಇದರಿಂದ ಕೂಡಾ ವಾಹನಗಳು ಕ್ರಾಸ್ ಮಾಡಲು ಕೂಡಾ ಆಗುತ್ತಿಲ್ಲ. ಇದು ಕೂಡಾ ಹೆದ್ದಾರಿ ಪ್ರಯಾಣಿಕರಿಗೆ ದೊಡ್ಡ ತಲೆ ನೋವಾಗಿದೆ. ಇನ್ನೂ ಇದೀಗ ಇದೇ ಜಾಗ ಅಪಘಾತ ವಲಯವಾಗಿದ್ದು, ಹೈವೆ ಸವಾರರ ಪಾಲಿಗೆ ಕಂಟಕವಾಗಿದೆ. ಇಷ್ಟಾದರೂ ಕೂಡಾ ಹೈವೆ ಅಥಾರಿಟಿ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೂಡಾ ವಹಿಸದೇ ನಿರ್ಲಕ್ಷ್ಯ ವಹಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಈ ಕುರಿತು ಚಿತ್ರದುರ್ಗ ನಗರಸಭೆ ಕಮಿಷನರ್ ಲಕ್ಷ್ಮಿ ಪ್ರತಿಕ್ರಿಯಿಸಿದ್ದು, ಕೂಡಲೇ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

Edited By :
PublicNext

PublicNext

04/04/2026 10:03 pm

Cinque Terre

7.61 K

Cinque Terre

0

ಸಂಬಂಧಿತ ಸುದ್ದಿ