ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಬಹುಕಾಲದ ನಿರೀಕ್ಷೆಗೆ ಸ್ಪಂದನೆ, ಅಪಾಯಕಾರಿ ಮಳಿಗೆಗಳು ನೆಲಸಮ!

ಚಳ್ಳಕೆರೆಯಲ್ಲಿ ನಗರಸಭೆಗೆ ಸೇರಿದ ಶಿಥಿಲಗೊಂಡ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ ಮಂಗಳವಾರ ಬೆಳಗ್ಗಿನಿಂದಲೇ ಜೋರಾಗಿ ಆರಂಭಗೊಂಡಿದೆ.

ನಗರದ ನೆಹರು ವೃತ್ತ ಬೆಂಗಳೂರು ರಸ್ತೆ, ಪಾವಗಡ ರಸ್ತೆ ಹಾಗೂ ಮಹದೇವಿ ರಸ್ತೆಯಲ್ಲಿರುವ ಹಳೆಯ ಹಾಗೂ ಅಪಾಯಕಾರಿಯಾಗಿದ್ದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಕ್ರಮಕ್ಕೆ ನಗರದಲ್ಲಿ ವ್ಯಾಪಕ ಚರ್ಚೆ ವ್ಯಕ್ತವಾಗಿದೆ.

ಕಾರ್ಯಾಚರಣೆಗೆ ಪೌರಾಯುಕ್ತೆ ನಾಗವೇಣಿ ಅವರು ಮುಂದಾಳತ್ವ ವಹಿಸಿದ್ದು, ಅವರ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿತ್ತು.

ನಗರಸಭೆ ಆಸ್ತಿಗಳ ಮೇಲೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಿಗೆ ಈ ಕ್ರಮ ಎಚ್ಚರಿಕೆಯ ಘಂಟೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Edited By : Vinayak Patil
PublicNext

PublicNext

31/03/2026 03:10 pm

Cinque Terre

11.53 K

Cinque Terre

0

ಸಂಬಂಧಿತ ಸುದ್ದಿ