ಚಳ್ಳಕೆರೆ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮದ ಸರ್ಕಾರಿ ಗೋಮಾಳ ಜಾಗದಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಯಾವುದೋ ಫ್ಯಾಕ್ಟರಿಯ ಕೆಮಿಕಲ್ ಆಯಿಲ್ ತಂದು ಸುರಿದು ಹೋಗಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗೋಮಾಳ ಜಾಗದಲ್ಲಿ ಸುರಿದಿರುವ ಕೆಮಿಕಲ್ ಆಯಿಲ್ ಸಮೀಪದಲ್ಲಿರುವ ಸಣ್ಣಕೆರೆಯತ್ತ ಹರಿಯುತ್ತಿದ್ದು, ಅದು ನೀರಿನಲ್ಲಿ ಮಿಶ್ರಣವಾದ್ರೆ ಸಾಕು ಪ್ರಾಣಿಗಳಿಗೆ ಕಂಟವಾಗುತ್ತೆ ಅಂತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ನೀರನ್ನು ಯಾರು ಸಹ ಬಳಸಬಾರದು ಎಂದು ಗ್ರಾಮಸ್ಥರಾದ ಚಿತ್ತಯ್ಯ ಮನವಿ ಮಾಡಿದ್ದಾರೆ.
ಜೊತೆಗೆ, ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಂಡು ಮೂಕಪ್ರಾಣಿಗಳಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
01/04/2026 02:25 pm
LOADING...