ಚಿತ್ರದುರ್ಗ: ಹೀಗೆ ಸಿನಿಮಾ ಸ್ಟೈಲ್ ನಲ್ಲಿ ಮನಸೋ ಇಚ್ಛೆ ಹೊಡೆಯುತ್ತಿರೋ ಯುವಕ. ಯುವಕನ ಏಟಿಗೆ ಆಸ್ಪತ್ರೆ ಬೆಡ್ ಸೇರಿರೋ ಹುಡುಗಿ ಪೋಷಕರು. ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಚಿತ್ರದುರ್ಗದ ಭರಮಸಾಗರ ಗ್ರಾಮ.
ಹೌದು... ಕಳೆದ ಮೂರು ತಿಂಗಳ ಹಿಂದೆ ಬೇವಿನಹಳ್ಳಿ ಮೂಲದ ತೀರ್ಥೇಶ್ ಹಾಗೂ ಭಾವನ ಮ್ಯಾರೇಜ್ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಒಂದೇ ಕೋಮಿನ ಇಬ್ಬರು ಕೂಡಾ ಪರಸ್ಪರ ಒಪ್ಪಿ ಮದುವೆ ಆಗಿದ್ದರು. ಅಷ್ಟೇ ಅಲ್ಲದೇ ಗುಟ್ಟಾಗಿ ಚಿತ್ರದುರ್ಗ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದರು. ಇದೇ ವಿಚಾರ ಎರಡು ಫ್ಯಾಮಿಲಿಗಳ ನಡುವಿನ ದ್ವೇಷಕ್ಕೆ ಕಾರಣವಾಗಿತ್ತು. ಯುವತಿ ಭಾವನ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಳಿಯ ತೀರ್ಥೇಶ್ ವಿರುದ್ಧ ಭಾವನ ತಾಯಿ ಊರಲ್ಲಿ ಜಗಳ ಕೂಡಾ ಮಾಡಿದರು. ಇದೇ ವಿಚಾರ ಭರಮಸಾಗರ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು. ಇದೇ ವೇಳೆ ಭರಮಸಾಗರ ಪೊಲೀಸ್ ಠಾಣೆಗೆ ಇಬ್ಬರ ಕಡೆಯವರು ರಾಜಿ ಪಂಚಾಯತಿಗೆ ಬಂದಿದ್ದರು. ಈ ವೇಳೆ ಯುವಕ ತೀರ್ಥೇಶ್ ವಿರುದ್ಧ ಮತ್ತೆ ಭಾವನ ಪೋಷಕರು ಗರಂ ಆಗಿದ್ದರು. ಆದರೆ ಏಕಾಏಕಿ ತೀರ್ಥೇಶ್ ಸಂಬಂಧಿಕರು ಭಾವನ ಪೋಷಕರ ಮೇಲೆ ದಾಳಿ ಮಾಡಿದ್ದಾರೆ.
ಠಾಣಾ ಹಿಂಭಾಗದ ಆವರಣದಲ್ಲಿ ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಅಟ್ಯಾಕ್ ಮಾಡಿದ್ದಾರೆ. ರಾಜಿಗೆ ಬಂದಿದ್ದ ಭಾವನ ದೊಡ್ಡಪ್ಪ ಮಲ್ಲೇಶ್ ನಾಯ್ಕ್, ತಾಯಿ ಸವಿತಾ ಬಾಯಿ, ತಂದೆ ಹೇಮ್ಲಾ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ.
ವಾ.ಓ೨: ಇನ್ನೂ ಗಲಾಟೆಯಲ್ಲಿ ಯುವತಿ ಭಾವನಳ ದೊಡ್ಡಪ್ಪ ಮಲ್ಲೇಶ್ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದು, ಮೂರು ಮಂದಿಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಈ ಹಿಂದೆ ಕೂಡಾ ತೀರ್ಥೇಶ್ ಗೆ ಮಗಳನ್ನ ಕೊಡಲ್ಲ ಎಂದು ಭಾವನ ತಾಯಿ ಸವಿತಾ ಬಾಯಿ ಹೇಳಿದ್ದರಂತೆ. ಇದೇ ದ್ವೇಷಕ್ಕೆ ಇದೀಗ ತೀರ್ಥೇಶ್ ಕಡೆಯವರು ಅಟ್ಯಾಕ್ ಮಾಡಿದ್ದಾರೆ ಎಂದು ಭಾವನ ಪೋಷಕರು ಆರೋಪಿಸಿದ್ದಾರೆ. ಇನ್ನೂ ಈ ಸಂಬಂಧ ಭರಮಸಾಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಯುವಕನ ತಾಯಿ ಭಾಗ್ಯಮ್ಮ, ಪುತ್ರ ತೀರ್ಥೇಶ್, ಹಾಗೂ ರಾಜು ನಾಯ್ಕ್ ವಿರುದ್ಧ ದೂರು ಕೂಡಾ ದಾಖಲಾಗಿದೆ.
ವಾ.ಓ೩: ಒಟ್ಟಾರೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನೆಮ್ಮದಿಯ ಜೀವನ ಮಾಡಬೇಕಿತ್ತು. ಆದರೆ ಎರಡು ಕುಟುಂಬಗಳ ಪ್ರತಿಷ್ಠೆಯ ಜಗಳಕ್ಕೆ ಯುವ ಜೋಡಿ ಕಂಗಾಲಾಗಿದ್ದಾರೆ. ಇನ್ನಾದರೂ ಎರಡು ಕಡೆಯವರು ದ್ವೇಷ ಮರೆತು ಪ್ರೀತಿಯನ್ನು ಗೌರವಿಸಲಿ, ನವ ದಂಪತಿಗಳ ಸುಖ ಸಂಸಾರಕ್ಕೆ ಕಾರಣವಾಗಲಿ ಅನ್ನೋದು ನಮ್ಮ ಆಶಯ.
PublicNext
03/04/2026 05:23 pm