ಚಿತ್ರದುರ್ಗ: ಹೀಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಯುವತಿ ಹೆಸರು 22 ವರ್ಷದ ಲಿಖಿತ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಆರ್. ನುಲೇನೂರು ನಿವಾಸಿ. ಕಳೆದ ಮೂರ್ನಾಕು ವರ್ಷಗಳಿಂದ ಮಲ್ಲಾಡಿಹಳ್ಳಿ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ BMS ಕೋರ್ಸ್ ಓದುತ್ತಿದ್ದಳು. ಆದ್ರೆ ಕೆಲ ತಿಂಗಳಿಂದ ಅದೇ ಕಾಲೇಜಿನಲ್ಲಿ BMS ಕೋರ್ಸ್ ಮುಗಿಸಿ ಇಂಟರ್ನ್‌ಶಿಪ್ ಮಾಡುತ್ತಿದ್ದಳು. ಇದೇ ವೇಳೆ ಕಾಲೇಜಿನಲ್ಲಿ ಉಪನ್ಯಾಸಕ ಡಾ. ರಾಜು ಜೊತೆ ಸಲುಗೆಯಿಂದ ಮಾತನಾಡುತ್ತಿದ್ದರು. ಅಲ್ಲದೇ BMS ಕೋರ್ಸ್ ವಿಷಯದಲ್ಲಿ ಕೆಲ ಡೌಟ್ ಗಳಿಗೂ ಡಾ.ರಾಜು ಬಳಿ ಪರಿಹಾರ ಕೇಳುತ್ತಿದ್ದಳು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಲಿಖಿತಾಳ ಸ್ನೇಹಿತರು, ಇಬ್ಬರ ನಡುವೆ ಅಕ್ರಮ ಸಂಬಂಧ ಇದೆ ಅಂತ ಪುಕಾರ ಹಬ್ಬಿಸಿದ್ದರು. ಕಾಲೇಜು ತುಂಬಾ ಲಿಖಿತ ಹಾಗೂ ಡಾ.ರಾಜು ನಡುವೆ ಲವ್ವಿ- ಡವ್ವಿ ನಡೀತಾ ಇದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೇ ವಿಷಯವನ್ನ ಈಕೆಯ ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ ಹಾಗೂ ಸಾಗರ್ ಉಪನ್ಯಾಸಕ ಡಾ.ರಾಜು ಪತ್ನಿಗೂ ಹೇಳಿದ್ದರು. ಇದೇ ವಿಚಾರಕ್ಕೆ ಡಾ.ರಾಜು ಪತ್ನಿ ನಿಶಾ ಕೂಡಾ ಲಿಖಿತ ವಿರುದ್ಧ ಗರಂ ಆಗಿದ್ದಳು. ಕಳೆದ ಕೆಲ ದಿನಗಳ ಹಿಂದೆ ಡಾ.ರಾಜು ಪತ್ನಿ ನಿಶಾ ಕಾಲೇಜಿಗೆ ಬಂದು ಸ್ನೇಹಿತರ ಮುಂದೆ ಗಲಾಟೆ ಮಾಡಿ ಹೋಗಿದ್ದಳು. ಇದೇ ವಿಷಯ ವಿದ್ಯಾರ್ಥಿನಿ ಲಿಖಿತ ಮನಸ್ಸಿಗೆ ನೋವು ಉಂಟು ಮಾಡಿತ್ತು. ಇದೇ ಅವಮಾನಕ್ಕೆ ಲಿಖಿತ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನೂ ಈ ವಿಷಯ ಲಿಖಿತ ಮನೆಯಲ್ಲೂ ಕೂಡಾ ಗೊತ್ತಾಗಿತ್ತು. ಇದೇ ಕಾರಣಕ್ಕೆ ಮೃತ ಯುವತಿ ಪೋಷಕರು ಕೂಡಾ ದುಷ್ಟ ಸ್ನೇಹಿತರಿಂದ ದೂರ ಇರುವುದಕ್ಕೂ ಹೇಳಿದ್ರು. ಆದ್ರೆ ಸಹಪಾಠಿ ಮಾತು ಕೇಳಿ ಕಾಲೇಜು ಕ್ಯಾಂಪಸ್ ಗೆ ಬಂದಿದ್ದ ಡಾ.ರಾಜು ಪತ್ನಿ ನಿಶಾ ಬಾಯಿಗೆ ಬಂದಂತೆ ಲಿಖಿತಾಳಿಗೆ ಬೈದಿದ್ದಳಂತೆ. ಇದೇ ಕಾರಣಕ್ಕೆ ಲಿಖಿತ ಹೊಳಲ್ಕೆರೆ ಪಟ್ಟಣದ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳದಲ್ಲೇ ಡೆತ್ ನೋಟ್ ಕೂಡಾ ಪತ್ತೆಯಾಗಿದ್ದು, ಸಾವಿನ ಸಿಕ್ರೇಟ್ ಕೂಡಾ ಬಯಲಾಗಿದೆ. ಇತ್ತ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಿಖಿತ ಸಹಪಾಠಿಗಳಾದ ಅನುಷಾ, ರಕ್ಷಾ, ಚಿನ್ಮಯಿ, ಸಾಗರ್ ಹಾಗೂ ನಿಶಾ ವಿರುದ್ಧ ಕೇಸ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಒಟ್ಟಾರೇ ಕಾಲೇಜಿನಲ್ಲಿ ಉತ್ತಮ ಹೆಸರು ಗಳಿಸಿದ್ದ ಲಿಖಿತ, ದುಷ್ಟ ಸಹಪಾಠಿಗಳ ಸಂಘಕ್ಕೆ ಜೀವ ತೆತ್ತಿದ್ದಾಳೆ. ತಾನು ಮಾಡದ ತಪ್ಪಿಗೆ ಪ್ರಾಣ ಬಿಟ್ಟಿದ್ದು, ಇತ್ತ ಇದ್ದ ಒಬ್ಬ ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಂಥ ಸುಳ್ಳು ಸುದ್ದಿ ಹರಡಿದ್ದ ದುರ್ಜನರ ಕೂಟಕ್ಕೆ ತಕ್ಕ ಶಿಕ್ಷೆಯಾಗಬೇಕು, ಲಿಖಿತ ಸಾವಿಗೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಆಶಯ
PublicNext
02/04/2026 06:42 pm