ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಖಾಸಗಿ ಬಸ್ ಮಾಲೀಕರ ಅಮಾನವೀಯ ನಿರ್ಲಕ್ಷ್ಯ - ಅಪಾಯಕಾರಿ ಸಂಚಾರಕ್ಕೆ ಆರ್‌ಟಿಒ ತಡೆ

ಚಳ್ಳಕೆರೆ: ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಖಾಸಗಿ ಬಸ್ ಮಾಲೀಕರು ನಡೆಸುತ್ತಿರುವ ಗಂಭೀರ ನಿರ್ಲಕ್ಷ್ಯ ಇದೀಗ ಬಯಲಿಗೆ ಬಂದಿದೆ. ವಿಮೆ ಹಾಗೂ ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ) ಇಲ್ಲದೆ ಅಕ್ರಮವಾಗಿ ಸಂಚರಿಸುತ್ತಿದ್ದ ಬಸ್ಸೊಂದನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತನಿಖೆಯಲ್ಲಿ ನಿರ್ಲಕ್ಷ್ಯ ಬಯಲು

ನಾಯಕನಹಟ್ಟಿ, ಕೊಟ್ಟೂರು, ಖಾನವಸಹಳ್ಳಿ ಹಾಗೂ ಹಗರಿ ಬೊಮ್ಮನಹಳ್ಳಿ ಮಾರ್ಗವಾಗಿ ಚಳ್ಳಕೆರೆಗೆ ಸಂಚರಿಸುತ್ತಿದ್ದ 'ಎಸ್.ಆರ್.ಜೆ' ಹೆಸರಿನ ಬಸ್‌ನ ವಿಮೆಯ ಅವಧಿಯು 2024ರಲ್ಲೇ ಮುಗಿದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಈ ಬಸ್‌ಗೆ ಯಾವುದೇ ಫಿಟ್ನೆಸ್ ಪ್ರಮಾಣಪತ್ರವೂ ಇರಲಿಲ್ಲ ಎಂದು ತಿಳಿದುಬಂದಿದೆ. ಇಂತಹ ನಿಯಮಬಾಹಿರವಾಗಿ ಬಸ್‌ನಲ್ಲಿ ಪ್ರಯಾಣಿಕರನ್ನು ಸಾಗಿಸಲಾಗುತ್ತಿತ್ತು.

ಸಾರ್ವಜನಿಕರಲ್ಲಿ ಆತಂಕ, ಕ್ರಮಕ್ಕೆ ಆಗ್ರಹ

ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂತಹ ನಿಯಮ ಉಲ್ಲಂಘನೆಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಒಂದು ವೇಳೆ ಅಪಘಾತ ಸಂಭವಿಸಿದರೆ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಭಾನುವಾರ ಬೆಳಿಗ್ಗೆ ಚಿತ್ರದುರ್ಗ ಆರ್‌ಟಿಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಸ್ಸನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

29/03/2026 03:02 pm

Cinque Terre

10.22 K

Cinque Terre

0

ಸಂಬಂಧಿತ ಸುದ್ದಿ