ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಡಗರ ಸಂಭ್ರಮದಿಂದ ಜರಗಿದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

ಚಳ್ಳಕೆರೆ :ಬೆಳಗೆರೆ- ಗ್ರಾಮದ ಆರಾದ್ಯ ದೈವ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು.

ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಂಡರು ಭಾನುವಾರ ಗುಡಿಕಟ್ಟೆಯ ಭಕ್ತರು ಸ್ವಾಮಿಯ ಉತ್ಸವ ಮೂರ್ತಿಗಳನ್ನು ವಿವಿಧ ಜನಪದ ವಾದ್ಯಗಳ ಮೂಲಕ ಹೊಳೆಪೂಜೆಗೆ ಕೊಂಡೊಯ್ದು ಅಲ್ಲಿ ವಿವಿಧ ದಾರ್ಮಿಕ ಕಾರ್ಯಗಳನ್ನು ಕೈಗೊಂಡರು ದೇವರ ಉತ್ಸವಕ್ಕೆಂದೇ ಹೊಸ ಒಡವೆ ವಸ್ತುಗಳ ನ್ನು ವಿವಿಧ ದಾರ್ಮಿಕ ವಿಧಿ ವಿದಾನಗಳ ಮೂಲಕ ದೇವರಿಗೆ ತೊಡಿಸಿದರು.

ಸಂಜೆ ಹೊಳೆಪೂಜೆಯ ಉತ್ಸವ ಪೂಜೆ ನಂತರ ಊರೊಳಗೆ ಮೆರವಣಿಗೆಯಲ್ಲಿ ಕರೆತಂದು ಇಡೀ ರಾತ್ರಿ ದೇವರ ಉತ್ಸವ ಜರುಗಿತು

ಸೋಮವಾರ ದಾಸೋಹ ದೇವರಿಗೆ ಕಂಕಣ ಧಾರಣೆ ಮಂಗಳವಾರ ದೇವಸ್ಥಾನದ ಬಳಿ ವಿವಿಧ ಹೋಮ ಹವನ

ಬುಧವಾರ ಪ್ರಾಣ ಗ್ರಹಣ ಹಿಟ್ಟಿನಾರತಿ ಸೇವೆ ನಂತರ ಅರಿವೆ ಅನ್ನ ಕಾರ್ಯಕ್ರಮ ಜರುಗಿತು.

ಹೂಗಳಿಂದ ಅಲಂಕರಿಸಲಾಗಿದ್ದ ಬ್ರಹ್ಮರಥದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಭಕ್ತರು ತೇರನ್ನ ಎಳೆಯುವ ಮೂಲಕ ತಮ್ಮ ಭಕ್ತಿರು ಭಕ್ತಿಯನ್ನ ಸಮರ್ಪಿಸಿದರು. ಶಾಸಕ ಟಿ ರಘುಮೂರ್ತಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಬ್ರಹ್ಮರಥೋತ್ಸವ ದೇವಸ್ಥಾನದ ಬಳಿ ಬಂದು ರಥಕ್ಕೆಹಣ್ಣು ಕಾಯಿ ಕರ್ಪೂರ ದೀಪ ಧೂಪ ಧನ ಕನಕಗಳನ್ನು ಅರ್ಪಿಸಿದರು ರಥೋತ್ಸವದ ವೇಳೆ ಕೆಲ ಭಕ್ತರು ಸೂರು ಬೆಲ್ಲ ಮೆಣಸು ಬಾಳೆಹಣ್ಣು ಕಾಯಿ ತಮಗಿಷ್ಟವಾದ ಪದಾರ್ಥಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು. .

Edited By : PublicNext Desk
Kshetra Samachara

Kshetra Samachara

03/04/2026 04:49 pm

Cinque Terre

1.02 K

Cinque Terre

0