ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಭ್ರಮದಿಂದ ನೆರವೇರಿದ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ಶಿವಮೊಗ್ಗ : ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ಶನಿವಾರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತ್ತು.ಮಂಗಳವಾರ ಕೊಡಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕೆಂಡಾರ್ಚನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಗುರುವಾರ ಉಚ್ಚಯ್ಯ ಉತ್ಸವ ನಡೆದಿತ್ತು. ಶನಿವಾರ ಮುಂಜಾನೆ ನಡೆದ ರಥೋತ್ಸವದಲ್ಲಿ ವಿರಾಜಮಾನವಾಗಿ ಕುಳಿತ ಆಂಜನೇಯ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತಾದಿಗಳು ಹಣ್ಣು ಕಾಯಿ ಮಾಡಿಸಿ ರಥ ಎಳೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಕೆಲವರು ರಥದ ಕಳಸಕ್ಕೆ ಬಾಳೆಹಣ್ಣು ಎಸೆದರು. ಹರಕೆ ಹೊತ್ತವರು ಮಕ್ಕಳ ಜವಳ ತೆಗೆಸಿ ಭಕ್ತಿ ಸಮರ್ಪಿಸಿ ಹರಕೆ ಕಾಣಿಕೆಗಳನ್ನು ತೀರಿಸಿದರು. ಡೊಳ್ಳು ತಮ್ಮಟೆ, ವೀರಗಾಸೆ ನೃತ್ಯ ಮೇಳಗಳು ರಾಜ ಬೀದಿ ಉತ್ಸವಕ್ಕೆ ಮೆರಗು ನೀಡಿದವು. ಗ್ರಾಮಸ್ಥರು ಭಕ್ತರಿಗೆ ಕೋಸಂಬರಿ ಹಾಗೂ ಪಾನಕ ಹಂಚಿದರು.

Edited By : PublicNext Desk
Kshetra Samachara

Kshetra Samachara

28/03/2026 03:19 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ