ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಕಾಶಿ ಜಾತ್ರೆ: ದೇವಸ್ಥಾನದ ಮುಂದೆಯೇ ಭಕ್ತನ ದುರಂತ ಸಾವು

ನಂಜನಗೂಡು: ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರೆಯನ್ನು ವೀಕ್ಷಿಸಲು ವೀಕ್ಷಿಸಲು ಬಂದಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರದ ಮಾಗಡಿಯಿಂದ ಆಗಮಿಸಿದ್ದ ನಂಜುಂಡಸ್ವಾಮಿ (65) ಮೃತ ದುರ್ದೈವಿ. ದೇವಸ್ಥಾನದ ಮುಂಭಾಗದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ, ಈತ ನಂಜುಂಡೇಶ್ವರ ಸ್ವಾಮಿಯ ಭಕ್ತ ಎಂದು ತಿಳಿದುಬಂದಿದ್ದು, ಪ್ರತಿವರ್ಷವು ಜಾತ್ರೆಯನ್ನು ನೋಡಲು ಆಗಮಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಡಯಾಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

30/03/2026 03:25 pm

Cinque Terre

7.96 K

Cinque Terre

0

ಸಂಬಂಧಿತ ಸುದ್ದಿ