ಹಾವೇರಿ: ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬೇಸತ್ತ ಹಾವೇರಿಯ ರಾಜೇಂದ್ರನಗರ ನಿವಾಸಿ ಶ್ರೀನಿವಾಸ್, ಇದೀಗ ಪರಿಸರ ಸ್ನೇಹಿ ಪರ್ಯಾಯ ಮಾರ್ಗಕ್ಕೆ ಮೊರೆ ಹೋಗಿದ್ದಾರೆ. ತಮ್ಮ ಮನೆಯ ಅಡುಗೆ ಅನಿಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಹಲವು ವರ್ಷಗಳ ಹಿಂದೆ ಸ್ಥಾಪಿಸಿದ್ದ ತಮ್ಮ ಬಯೋಗ್ಯಾಸ್ ಘಟಕಕ್ಕೆ ಇದೀಗ ಮರು ಚಾಲನೆ ನೀಡಲು ಮುಂದಾಗಿದ್ದಾರೆ.
ಬಯೋಗ್ಯಾಸ್ ಘಟಕ: ಕಾರ್ಯ ಮತ್ತು ಪ್ರಯೋಜನಗಳು
ಸುಮಾರು ನಾಲ್ಕು ವರ್ಷಗಳ ಹಿಂದೆ 15 ಸಾವಿರ ರೂಪಾಯಿ ವೆಚ್ಚದಲ್ಲಿ ಶ್ರೀನಿವಾಸ್ ಈ ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಿದ್ದರು. ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣಕಸ, ಹಸಿ ಕಸ ಹಾಗೂ ತರಕಾರಿ ತ್ಯಾಜ್ಯಗಳನ್ನು ಬಳಸಿ ಇಲ್ಲಿ ಬಯೋಗ್ಯಾಸ್ ಉತ್ಪಾದಿಸಲಾಗುತ್ತದೆ. ಬಯೋಗ್ಯಾಸ್ ಬಳಕೆಯಿಂದ ಶೇ. 60ರಷ್ಟು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಳಿತಾಯ ಮಾಡಬಹುದು ಎಂದು ಶ್ರೀನಿವಾಸ್ ಹೇಳುತ್ತಾರೆ. ಸರ್ಕಾರ ಇಂತಹ ಪರಿಸರ ಸ್ನೇಹಿ ಪರ್ಯಾಯ ಇಂಧನ ಮೂಲಗಳಿಗೆ ಉತ್ತೇಜನ ನೀಡಬೇಕು ಎಂಬುದು ಅವರ ಆಗ್ರಹ.
PublicNext
30/03/2026 03:30 pm
LOADING...