ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆಯಿಲ್ಲ - ಡಿಸಿ

ಹಾವೇರಿ ಜಿಲ್ಲೆಯಲ್ಲಿ ಯಾವುದೇ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲ ಎಂದು ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ತಿಳಿಸಿದ್ದಾರೆ. ಸಿಲಿಂಡರ್ ಏಜೆನ್ಸಿಗಳು ಯಾಕೆ ಕಚೇರಿ ಮುಂದೆ ನೋ ಸ್ಟಾಕ್ ಅಂತಾ ಹಾಕಿದ್ದಾರೆ ಗೊತ್ತಿಲ್ಲ ಈ ಕುರಿತಂತೆ ಪರಿಶೀಲನೆ ಮಾಡುವುದಾಗಿ ಡಾ.ವಿಜಯಮಹಾಂತೇಶ್ ತಿಳಿಸಿದರು.

ಹಾವೇರಿ ಜಿಲ್ಲೆಗೆ ಮನೆಬಳಕೆಯ 6604 ವಾಣಿಜ್ಯ ಬಳಕೆಯ 361 ಸಿಲಿಂಡರ್‌ಗಳ ಬೇಡಿಕೆ ಇತ್ತು. ನಾವು 4715 ತುಂಬಿದ ಸಿಲಿಂಡರ್ ಪಡೆದಿದ್ದೇವೆ. 50 ವಾಣಿಜ್ಯ ಸಿಲಿಂಡರ್‌ ಪಡೆದಿದ್ದೇವೆ. ಅದರಲ್ಲಿ ಮನೆಗಳಿಗೆ ಬಳಿಸುವ ಎಲ್ಪಿಜಿ ಸಿಲಿಂಡರ್ 4536 ಹಾಗೂ 70 ವಾಣಿಜ್ಯ ಸಿಲಿಂಡರ್‌ಗಳ ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಂಗಳವಾರ ವಿತರಕರ ಬಳಿ ಮನೆಬಳಕೆಯ 6783 ಸಿಲಿಂಡರ್ ಮತ್ತು 341 ವಾಣಿಜ್ಯ ಸಿಲಿಂಡರ್‌ಗಳು ಇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕೆಲವೊಂದು ಹೋಟೆಲ್ ಮಾಲೀಕರು ನೋಂದಣಿ ಮಾಡಿಸದ ಕಾರಣ ಈ ಸಮಸ್ಯೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Edited By : Shivu K
PublicNext

PublicNext

31/03/2026 10:42 pm

Cinque Terre

19.02 K

Cinque Terre

0