ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಎಲ್‌ಪಿಜಿಯಿಂದ ಪಿಎನ್‌ಜಿ‌ಯತ್ತ ವಾಲುತ್ತಿರುವ ಗ್ರಾಹಕರು

ಹಾವೇರಿ: ಹಾವೇರಿಯಲ್ಲಿ ಕಳೆದ ಎರಡು ವರ್ಷದಿಂದ ಪಿಎನ್‌ಜಿ ಪೈಪ್‌ಗಳ ಮೂಲಕ ಮನೆ ಮನೆಗೆ ಗ್ಯಾಸ್ ಪೂರೈಸುವ ಯೋಜನೆಗೆ ಈಗ ಹೆಚ್ಚು ಜನ ಆಕರ್ಷಿತರಾಗುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಹಾವೇರಿಯ ಬಸವೇಶ್ವರ ನಗರದಲ್ಲಿ 95 ಗ್ರಾಹಕರು ಇದರ ಸಂಪರ್ಕ ಪಡೆದಿದ್ದರು.

ಇದೀಗ ಯುದ್ಧ ಪ್ರಾರಂಭವಾದ ನಂತರ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ಬಳಲಿದ ಸಾರ್ವಜನಿಕರು ಪಿಎನ್‌ಜಿ ಸಂಪರ್ಕ ಪಡೆಯಲು ಮುಂದಾಗಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಸುಮಾರು 50 ಜನರು ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪಿಎನ್‌ಜಿ ಕಂಪನಿಯ ಸಿಬ್ಬಂದಿ ತಿಳಿಸಿದ್ದಾರೆ.

ಎಲ್‌ಪಿಜಿ ಗಿಂತ ಪಿಎನ್‌ಜಿ ಹೆಚ್ಚು ಅನುಕೂಲಕಾರಿಯಾಗಿದೆ. ಎಲ್‌ಪಿಜಿ ತರಹ ಇದನ್ನ ಸಂಗ್ರಹ ಮಾಡಿಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಗ್ರಾಹಕರಿಗೆ ಒಂದು ದಿನಕ್ಕೆ ಎಷ್ಟು ಬೇಕು ಅಷ್ಟು ಅನಿಲ ಪೂರೈಕೆಯಾಗುತ್ತೆ. ಮತ್ತೆ ಬುಕ್ ಮಾಡಬೇಕು ವೇಯ್ಟ್ ಮಾಡಬೇಕು ಎನ್ನುವ ಸಮಸ್ಯೆ ಇದರಲ್ಲಿ ಇಲ್ಲ ಎನ್ನುತ್ತಾರೆ ಪಿಎನ್‌ಜಿ ಗ್ರಾಹಕರು.

Edited By :
PublicNext

PublicNext

01/04/2026 12:01 pm

Cinque Terre

9.63 K

Cinque Terre

0