ಬೆಳಗಾವಿ: ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 5 ದಿನಗಳ ಬೇಸಿಗೆ ವಿಜ್ಞಾನ ಶಿಬಿರವನ್ನು ಶಿವಬಸವ ನಗರದ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂಲ ವಿಜ್ಞಾನ ಕುರಿತು ವಿವಿಧ ಪ್ರಯೋಗ ಕೈಗೊಳ್ಳುವುದು, ವಿಜ್ಞಾನ ಮಾದರಿ ತಯಾರಿಸುವ ಕೌಶಲ್ಯ ಕಲಿಸಿಕೊಡುವುದು ಹಾಗೂ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ವಿಜ್ಞಾನದ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದು ಶಿಬಿರದ ಉದ್ದೇಶಗಳಾಗಿವೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಹಾಗು ನೋಂದಣಿಗಾಗಿ ಮೊಬೈಲ್ ನಂ. 9008442557 ಗೆ ಸಂಪರ್ಕಿಸಬಹುದಾಗಿದೆ.
PublicNext
31/03/2026 07:42 pm
LOADING...