ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಏಪ್ರಿಲ್ 15 ರಿಂದ 24 ರವರೆಗೆ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ

ಬೆಳಗಾವಿ: ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ, 8 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 15 ರಿಂದ 24 ರವರೆಗೆ 10 ದಿನಗಳ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ ಹಮ್ಮಿಕೊಳ್ಳಲಾಗಿದೆ.

ಎಳೆಯ ವಯಸಿನಲ್ಲಿಯೇ ವಿದ್ಯಾರ್ಥಿಗಳಿಗೆ ಶರಣ ಸಂಸ್ಕೃತಿ ಪರಿಚಯಿಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಶಿಬಿರದಲ್ಲಿ ವಚನ ಸಾಹಿತ್ಯ, ಕಾಯಕ, ದಾಸೋಹ, ಪ್ರಸಾದ, ಶಿಸ್ತು, ಸಂಸ್ಕಾರ ಹಾಗೂ ದೇಶಭಕ್ತಿಯ ಭಾವವನ್ನು ಮೂಡಿಸಲಾಗುವುದು.

ಇಲ್ಲಿ ಶಿಕ್ಷಣ ಎಂದರೆ ಕಲಿವ ಪುಸ್ತಕವಲ್ಲ ಬದಲಾಗಿ ಬದುಕು ರೂಪಿಸುವ ತರಬೇತಿ ಕೇಂದ್ರ. ಪ್ರತಿನಿತ್ಯ ಯೋಗ ಜ್ಞಾನದ ಜೊತೆಗೆ ಕರಾಟೆ, ಚೆಸ್, ಡ್ರಾಯಿಂಗ್, ಸಂಗೀತ ಕಲಿಯಲು ಅವಕಾಶ ಇದೆ. ಮಕ್ಕಳು ತಮ್ಮ ಕೆಲಸ ತಾವು ಮಾಡಿಕೊಳ್ಳಬೇಕು. ಬಟ್ಟೆ ಒಗೆಯುವುದರಿಂದ ಹಿಡಿದುಕೊಂಡು ಎಲ್ಲಾ ಕೆಲಸವನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ.

ಬಸವಾದಿ ಶಿವ ಶರಣರು ತಿಳಿಸಿಕೊಟ್ಟ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು, ತಜ್ಞರಿಂದ ಉಪನ್ಯಾಸ, ಶರಣರ ಕ್ಷೇತ್ರ ಅಧ್ಯಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಶಿಸ್ತು, ಸಂಸ್ಕಾರ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯ ಕುರಿತು ಅರಿವು ಮೂಡಿಸಲಾಗುತ್ತದೆ

ಶರಣರ ಜೀವನ ಚರಿತ್ರೆ, ಕಾಯಕ-ದಾಸೋಹ ಮತ್ತು ಪ್ರಸಾದ, ವಚನಗಳಲ್ಲಿ ವಿಜ್ಞಾನ, ಮಾನವೀಯ ಮೌಲ್ಯಗಳು, ಪರಿಸರ ಸಂರಕ್ಷಣೆ, ದೇಶಭಕ್ತಿ, ತಂದೆ-ತಾಯಿ ಮತ್ತು ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಲಾಗುತ್ತಿದೆ.

ನೋಂದಣಿಗೆ ಕೊನೆಯ ದಿನಾಂಕ - ಏಪ್ರಿಲ್ 10, 2026.

ಪ್ರವೇಶ ಶುಲ್ಕ : ₹1,000

Edited By : Vinayak Patil
PublicNext

PublicNext

26/03/2026 05:49 pm

Cinque Terre

30.23 K

Cinque Terre

0

ಸಂಬಂಧಿತ ಸುದ್ದಿ