ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯು ಸೈನ್ಸ್ ಶಿಕ್ಷಣದಲ್ಲಿ ನಂಬಿಕೆಗೆ ಇನ್ನೊಂದು ಹೆಸರೇ ಶ್ರೀ ನಾಗನೂರು ಪ್ರಭುದೇವ ಸೈನ್ಸ್ ಕಾಲೇಜ್

ಬೆಳಗಾವಿ: ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ... ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಸ್ಥಾನ ಹೊಂದಿದೆ. ಇಲ್ಲಿ ಶಿಕ್ಷಣ ಎಂದರೆ ಕೇವಲ ಪುಸ್ತಕವಲ್ಲ, ಬದಲಾಗಿ ಬದುಕು ರೂಪಿಸುವ ತರಬೇತಿ ಕೇಂದ್ರವಾಗಿದೆ. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ನಾಗನೂರು ಪ್ರಭುದೇವ ಸೈನ್ಸ್ ಪಿಯು ಕಾಲೇಜಿನಲ್ಲಿ 2026-2027 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರವೇಶಗಳು ಆರಂಭವಾಗಿದೆ.‌

ಶಿಕ್ಷಣ ಕ್ಷೇತ್ರದಲ್ಲಿ ಹಲವು ಆಯ್ಕೆಗಳು ಇದ್ದರೂ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೂ ಸಮಾನ ಮಹತ್ವ ನೀಡಿ, ಮನೆಯಂತೆಯೇ ಮಮತೆಯಿಂದ ಶಿಕ್ಷಣ ನೀಡುವ ಸಂಸ್ಥೆಗಳು ವಿರಳ. ಅಂತಹ ಉತ್ತಮ ಸಂಸ್ಥೆಗಳ ಪೈಕಿ ಶ್ರೀ ನಾಗನೂರು ಪ್ರಭುದೇವ ಸೈನ್ಸ್ ಪಿಯು ಕಾಲೇಜು ತನ್ನ ವಿಶಿಷ್ಟವಾದ ಕಾರ್ಯಶೈಲಿಯಿಂದ ಹೆಸರಾಗುತ್ತಿದೆ.

ಬೆಳಗಾವಿಯ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಇರುವ ಈ ಕಾಲೇಜು, ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ. ಇಲ್ಲಿ ಅನುಭವ ಸಂಪನ್ನ ಹಾಗೂ ವಿಷಯ ಪರಿಣತಿ ಹೊಂದಿದ ಉಪನ್ಯಾಸಕರ ತಂಡದಿಂದ ಸುಲಭ ಮತ್ತು ಸ್ಪಷ್ಟ ಬೋಧನೆ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವುದು ಕಾಲೇಜಿನ ವಿಶೇಷತೆ.

ಸುಸಜ್ಜಿತ ಗ್ರಂಥಾಲಯ, ಆಧುನಿಕ ಪ್ರಯೋಗಾಲಯಗಳು ಹಾಗೂ ಅಗತ್ಯವಾದ ಎಲ್ಲಾ ಶೈಕ್ಷಣಿಕ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವಂತೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ಶುಚಿ-ರುಚಿಕರ ಆಹಾರ ವ್ಯವಸ್ಥೆ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಕಾಲೇಜಿಗೆ ಪ್ರತ್ಯೇಕ ಬಸ್ ವ್ಯವಸ್ಥೆಯೂ ಇದೆ. ಅಧ್ಯಯನದ ಸಮಯದಲ್ಲಷ್ಟೇ ಅಲ್ಲ, ದಿನಪೂರ್ತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಬೋಧಕ ವೃಂದ ಇಲ್ಲಿದೆ.

ಪಿಯುಸಿ ನಂತರದ ಜೆಇಇ, ನೀಟ್, ಕೆ-ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಉನ್ನತ ಗುರಿಗಳನ್ನು ಸಾಧಿಸಲು ನೆರವಾಗುತ್ತಿದೆ. ಅಷ್ಟೇ ಅಲ್ಲದೆ ಯುವ ವಿಜ್ಞಾನಿ ಕಾರ್ಯಕ್ರಮ ನಡೆಸುವ ಮೂಲಕ ಭವಿಷ್ಯದ ವಿಜ್ಞಾನಿಗಳಿಗೆ ಈಗಿನಿಂದಲೇ ಬುನಾದಿ ಹಾಕಲಾಗುತ್ತದೆ.

2026-27ನೇ ಶೈಕ್ಷಣಿಕ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95%ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಗಳು ದೊರೆಯಲಿವೆ.

ಗುಣಮಟ್ಟದ ಶಿಕ್ಷಣ, ಶಿಸ್ತಿನ ವಾತಾವರಣ ಮತ್ತು ವೈಯಕ್ತಿಕ ಕಾಳಜಿಯೊಂದಿಗೆ ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ನಾಗನೂರು ಶ್ರೀ ಪ್ರಭುದೇವ ಸೈನ್ಸ್ ಪಿಯು ಕಾಲೇಜಿಗೆ ಇಂದೇ ಭೇಟಿ ನೀಡಿ ಅಥವಾ ಮೊಬೈಲ್ ಸಂಖ್ಯೆ: 82771 75072, 8747054914 ಗೆ ಕರೆ ಮಾಡಿ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/03/2026 05:56 pm

Cinque Terre

25.94 K

Cinque Terre

0

ಸಂಬಂಧಿತ ಸುದ್ದಿ