ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಧ್ಯರಾತ್ರಿಯ ಮಳೆಯ ಆರ್ಭಟ, ರಸ್ತೆಗೆ ಎಫ್ ಸಿಐ ತಡೆಗೋಡೆ ಕುಸಿದು ವಾಹನ‌ ಜಖಂ

ಶಿವಮೊಗ್ಗ : ತಡರಾತ್ರಿ ಗುಡುಗು ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಯ ವೇಳೆ, ಶಿವಮೊಗ್ಗ ನಗರದ ಹೊರವಲಯ ಆಲ್ಕೋಳದಲ್ಲಿರುವ ಎಫ್ ಸಿ ಐ (ಭಾರತೀಯ ಆಹಾರ ನಿಗಮ) ಕಚೇರಿಯ ಬೃಹದಾಕಾರದ ಕಾಂಪೌಂಡ್ ರಸ್ತೆ ಮೇಲೆ ಉರುಳಿ ಬಿದ್ದ ಘಟನೆ ನಡೆದಿದೆ.

ಕಾಂಪೌಂಡ್ ಗೋಡೆ ಪಕ್ಕ ನಿಲ್ಲಿಸಿದ್ದ ಟಾಟಾ ಏಸ್ ಸರಕು ಸಾಗಾಣೆ ವಾಹನದ ಮೇಲೆ ಗೋಡೆ ಕುಸಿದು ಬಿದ್ದಿರುವುದರಿಂದ, ವಾಹನವು ಸಂಪೂರ್ಣ ಜಖಂಗೊಂಡಿದೆ. ಹಾಗೆಯೇ ವಿದ್ಯುತ್ ಕಂಬಗಳು ಕೂಡ ಧರಾಶಾಹಿಯಾಗಿವೆ. ಸುಮಾರು 15 ಅಡಿಗೂ ಎತ್ತರದ ಕಾಂಪೌಂಡ್ ಗೋಡೆಯಾಗಿದೆ. ಹಗಲು ವೇಳೆ ಏನಾದರೂ ಬಿದ್ದಿದ್ದರೆ ಭಾರೀ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಘಟನೆಯಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ವ್ಯತ್ಯಯವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾಂಪೌಂಡ್ ಗೋಡೆಯಿಂದ ಸಂಪೂರ್ಣ ಹಾನಿಗೀಡಾಗಿರುವ ಟಾಟಾ ಏಸ್ ಸರಕು ಸಾಗಾಣೆ ವಾಹನ ಮಾಲೀಕರಿಗೆ ಎಫ್ ಸಿ ಐ ಸಂಸ್ಥೆ ಸೂಕ್ತ ಪರಿಹಾರ ನೀಡಬೇಕು ಎಂದು ಇದೇ ವೇಳೆ ಸ್ಥಳೀಯರು ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

01/04/2026 02:30 pm

Cinque Terre

920

Cinque Terre

0

ಸಂಬಂಧಿತ ಸುದ್ದಿ