ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡಾನೆಗಳ ಅಬ್ಬರಕ್ಕೆ ನಲುಗಿದ ಉಂಬಳೇಬೈಲು : ಅಡಿಕೆ, ತೆಂಗು ನಾಶ - ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಉಂಬಳೇಬೈಲು ನಲ್ಲಿ ಕಾಡಾನೆಗಳು ದಾಂದಲೆ ಮುಂದುವರೆದಿದೆ. ಎರಡು ಕಾಡಾನೆಗಳು ಅಡಿಕೆ ಮರ ಮತ್ತು ತೆಂಗಿನ ಮರವನ್ನು ಸಂಪೂರ್ಣವಾಗಿ ಮುರಿದು ಹಾಕಿದ್ದು ರೈತರು ಕಂಗಲಾಗಿದ್ದಾರೆ .

ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿಯನ್ನು ಸಲ್ಲಿಸಿದರು ಕೂಡ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಇನ್ನು ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

03/04/2026 04:43 pm

Cinque Terre

180

Cinque Terre

0

ಸಂಬಂಧಿತ ಸುದ್ದಿ