ಶಿವಮೊಗ್ಗ ಜಿಲ್ಲೆ, ತ್ಯಾವರೆಕೊಪ್ಪ ಮೃಗಾಲಯದಲ್ಲಿ ಇತ್ತೀಚಿಗೆ ನೀರಾನೆ ದಾಳಿಯಿಂದ ಮೃತಪಟ್ಟ ಯುವ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಆನೇಕಲ್ ಬಳಿಯ ನಿವಾಸಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಇಂದು ಭೇಟಿ ನೀಡಿ ಅವರ ಪಾಲಕರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಪ್ರಾಣಿ ಪ್ರೀತಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಡಾ.ಸಮೀಕ್ಷಾ ರೆಡ್ಡಿಯವರ ಸಾವು ಅತ್ಯಂತ ನೋವಿನ ಸಂಗತಿಯಾಗಿದ್ದು, ಅವರ ಸ್ಮರಣಾರ್ಥ ಸರ್ಕಾರ ಏನಾದರೊಂದು ಕಾರ್ಯಕ್ರಮ ರೂಪಿಸಲಿದೆ ಎಂದರು.
ಇನ್ನು, ಡಾ.ಸಮೀಕ್ಷಾ ರೆಡ್ಡಿಯವರ ಸಾವಿನ ಕುರಿತು ತನಿಖೆಗೂ ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ದುರ್ಘಟನೆಗಳು ನಡೆಯದಂತೆ ಸರ್ಕಾರ ನೂತನ ಮಾರ್ಗಸೂಚಿ ಮೂಲಕ ಕ್ರಮ ಕೈಗೊಳ್ಳಲಿದೆ ಎಂದೂ ಸಚಿವರು ತಿಳಿಸಿದರು. ಇದೇ ವೇಳೆ, ತಮ್ಮ ಮಗಳನ್ನು ಕಳೆದುಕೊಂಡು ದು:ಖದಲ್ಲಿರೋ ಸಮೀಕ್ಷಾ ರೆಡ್ಡಿಯವರ ಪೋಷಕರು ತಮ್ಮ ಮಗಳ ಹೆಸರನ್ನು ಆನೆಯೊಂದಕ್ಕೆ ಇಡಬೇಕೆಂದು ಸಚಿವರಲ್ಲಿ ಕೋರಿಕೊಂಡರು ಎಂದು ಮೂಲಗಳು ತಿಳಿಸಿವೆ.
PublicNext
24/03/2026 10:56 pm
LOADING...