ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಿಗದ ಸಿಲಿಂಡರ್: ರಸ್ತೆ ತಡೆದು ಪ್ರತಿಭಟಿಸಿದ ಜನ

ಬೆಳಗಾವಿ: ಸಿಲಿಂಡರ್ ಗಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ತಿಂಗಳಿನಿಂದ ಸಿಲಿಂಡರ್ ಸಿಗದೆ ಕಂಗಾಲಾಗಿರುವ ಜನ ನಡುರಸ್ತೆಯಲ್ಲೇ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಕಳೆದೊಂದು ತಿಂಗಳಿನಿಂದ ಸಿಲಿಂಡರ್ ಕೊಡ್ತಿಲ್ಲ. ಹೆಚ್ಚಿನ ಹಣ ಕೊಟ್ಟವರಿಗೆ ಮಾತ್ರ ಸಿಲಿಂಡರ್ ಕೊಡಲಾಗುತ್ತಿದೆ. ನಮಗೆ ನಾಳೆ ಬಾ ನಾಳೆ ಎನ್ನುತ್ತಿದ್ದಾರೆ ಎಂದು ಮಹಿಳೆಯರ ಆಕ್ರೋಶ ಹೊರ ಹಾಕಿದ್ದಾರೆ.

Edited By : Shivu K
PublicNext

PublicNext

01/04/2026 05:05 pm

Cinque Terre

13.56 K

Cinque Terre

0

ಸಂಬಂಧಿತ ಸುದ್ದಿ