ಉತ್ತರ ಪ್ರದೇಶ : ದೇಶಾದ್ಯಂತ ಇಂದು ಹನುಮ ಜಯಂತಿಯನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಇಂದು ಹನುಮ ಜಯಂತಿಯ ಸಂಭ್ರಮ ಮನೆಮಾಡಿದ್ದು, ಇಲ್ಲಿನ ಪ್ರಸಿದ್ಧ 'ಬಡೇ ಹನುಮಾನ್' ಮಂದಿರದಲ್ಲಿ ಮಾರುತಿಯ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿದೆ. ಬೆಳ್ಳಂಬೆಳಗ್ಗೆಯೇ ಸಾವಿರಾರು ಭಕ್ತರು ದೇವಸ್ಥಾನದತ್ತ ಹೆಜ್ಜೆ ಹಾಕಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಮಲಗಿರುವ ಭಂಗಿಯಲ್ಲಿ ಆಂಜನೇಯನ ದರ್ಶನ
ಗಂಗಾ ನದಿಯ ತಟದಲ್ಲಿರುವ ಈ ವಿಶಿಷ್ಟ ದೇವಸ್ಥಾನದಲ್ಲಿ, ಆಂಜನೇಯನು ಮಲಗಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಹನುಮ ಜಯಂತಿಯ ವಿಶೇಷವಾಗಿ, ಈ ವಿಗ್ರಹಕ್ಕೆ ವಿಶೇಷ ಸಿಂಧೂರ ಲೇಪನ ಮತ್ತು ಆಕರ್ಷಕ ಅಲಂಕಾರ ಮಾಡಲಾಗಿದೆ. ಭಕ್ತರು 'ಬಜರಂಗ್ ಬಲಿ'ಯ ಆಶೀರ್ವಾದ ಪಡೆಯಲು ದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಂದಿರದ ಸುತ್ತಮುತ್ತ 'ಜೈ ಶ್ರೀ ರಾಮ್' ಮತ್ತು 'ಹನುಮಾನ್ ಚಾಲೀಸಾ' ಪಠಣಗಳು ಮೊಳಗುತ್ತಿದ್ದು, ಭಕ್ತಿ ಪರಾಕಾಷ್ಠೆ ತಲುಪಿದೆ.
ಭಕ್ತರ ಸುರಕ್ಷತೆ ಮತ್ತು ಸುಗಮ ದರ್ಶನಕ್ಕಾಗಿ ದೇವಸ್ಥಾನದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಭಕ್ತರಿಗೆ ತೊಂದರೆಯಾಗದಂತೆ ಮಂದಿರ ಮಂಡಳಿಯು ಸಮಗ್ರ ವ್ಯವಸ್ಥೆಗಳನ್ನು ಕೈಗೊಂಡಿದೆ.
PublicNext
02/04/2026 11:35 am
LOADING...