ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶತ ಕಲಶ ಸಂಪ್ರೋಕ್ಷಣೆ

ಮುಲ್ಕಿ:ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಚೈತ್ರ ಶುದ್ದ ಹುಣ್ಣಿಮೆ ಗುರುವಾರ ಶತ ಕಲಶ ಸಂಪ್ರೋಕ್ಷಣೆ ನಡೆಯಿತು. ಮುಂಜಾನೆ ಮಹಾ ಪ್ರಾರ್ಥನೆಯ ಬಳಿಕ ದೇವರಿಗೆ ಪಂಚಾಮೃತ, ಸೀಯಾಳ ಅಭಿಶೇಕ, ಬಳಿಕ ಶತ ಕಲಶಾಭಿಶೇಕ, ಕನಕಾಭಿಶೇಕ, ಗಂಗಾ ಭಾಗೀರಥಿ ಅಭಿಶೇಕಗಳು ನಡೆದವು. ಶ್ರೀದೇವರಿಗೆ ಸಿಂಹಾಸನದಲ್ಲಿ ಅಷ್ಟ ಮಂಗಲ ನಿರೀಕ್ಷಣೆ, ಪಟ್ಟ ಕಾಣಿಕೆ, ಮಹಾ ನೈವೇದ್ಯ, ಮಹಾಮಂಗಳಾರತಿ, ದರ್ಶನ ಸೇವೆ, ಪ್ರಸಾದ ಬಳಿಕ ಭೂರಿ ಸಮಾರಾಧನೆ ನಡೆಯಿತು.

ರಾತ್ರಿ ಪೂಜೆ ,ದೀಪಾರಾಧನೆ, ರಥೋತ್ಸವ, ದೇವದರ್ಶನ ಸಹಿತ ನಿತ್ಯೋತ್ಸವ, ಚಂದ್ರಮಂಡಲ ಉತ್ಸವ, ವಸಂತ ಪೂಜೆ ನಡೆಯಿತು. ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕವೃಂದ ,ಆಡಳಿತ ಮಂಡಳಿ,ಭಜಕವ್ರಂದ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

02/04/2026 02:58 pm

Cinque Terre

3.41 K

Cinque Terre

0