ಮಂಗಳೂರು: ಎಲ್‌ಪಿಜಿ ಅಭಾವ ಕಾಡುತ್ತಿದ್ದು, ಮಂಗಳೂರಿನಲ್ಲಿ ಇತ್ತೀಚೆಗೆ ಎಲ್‌ಪಿಜಿ ಹಾಕಲು ಬಂಕ್ ಮುಂದೆ ಆಟೋರಿಕ್ಷಾಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿತ್ತು. ಇದೀಗ ಎಲ್‌ಪಿಜಿ ಇಲ್ಲದೆ ಆಟೋರಿಕ್ಷಾಗಳು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ನಗರದ ಬಹುತೇಕ ಬಂಕ್‌ಗಳಲ್ಲಿ ಎಲ್‌ಪಿಜಿ ಖಾಲಿಯಾಗಿದೆ. ಆಟೋಗಳಿಗೆ ಗ್ಯಾಸ್ ತುಂಬಿಸಲು ಚಾಲಕರು ಪರದಾಡುತ್ತಿದ್ದಾರೆ. ಸದ್ಯ ನಗರದಲ್ಲಿರುವ ಏಳಕ್ಕೂ ಅಧಿಕ ಗ್ಯಾಸ್ ಬಂಕ್‌ಗಳು ಇದ್ದರೂ ಎಲ್ಲೂ ಗ್ಯಾಸ್ ಲಭ್ಯವಿಲ್ಲ. ಬಲ್ಮಠ ಗೋ ಗ್ಯಾಸ್ ಬಂಕ್‌ನಲ್ಲಿ ಮಂಗಳವಾರದವರೆಗೆ ಗ್ಯಾಸ್ ಲಭ್ಯವಿತ್ತು. ಆದ್ದರಿಂದ ಆಟೋರಿಕ್ಷಾಗಳು ಗ್ಯಾಸ್ ತುಂಬಿಸಲು ಅಲ್ಲಿಗೇ ಬಂದಿದ್ದರು. ಇದೀಗ ಅಲ್ಲೂ ಗ್ಯಾಸ್ ಇಲ್ಲದೆ ಆಟೋರಿಕ್ಷಾ ಚಾಲಕರು ಗ್ಯಾಸ್ ತುಂಬಿಸಲು ಬಂದು ಗ್ಯಾಸ್ ಸಿಗದೆ ಹಿಂದೆ ಹೋಗುತ್ತಿದ್ದಾರೆ.
ಕೆಲ ಆಟೋ ಚಾಲಕರು ಗ್ಯಾಸ್ ಅಭಾವದ ಬಗ್ಗೆ ಅಳಲು ತೋಡಿಕೊಂಡರು. ಸಾಲಸೋಲ ಮಾಡಿ ಆಟೋರಿಕ್ಷಾ ತೆಗೆದುಕೊಂಡಿದ್ದೇವೆ. ಇದೀಗ ಗ್ಯಾಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ಸರಕಾರ ಈ ಬಗ್ಗೆ ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ವಿನಂತಿ ಮಾಡಿಕೊಂಡರು.
PublicNext
02/04/2026 05:16 pm
LOADING...