ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುವ ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟ ಸಹೋದರಿಯರು - ಚಾಲಕ - ನಿರ್ವಾಹಕನ ವಿರುದ್ಧ ಕೇಸ್

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಸಮೀಪ ಮಾ.31ರಂದು ಬೆಳಗ್ಗೆ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದು ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆಯ ಬಗ್ಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳಿಯದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಚಾಲಕ ದಯಾನಂದ ಅತ್ಯಂತ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದಿದ್ದು, ನಿರ್ವಾಹಕ ಕಾಶಿನಾಥ್ ಬಸ್ಸಿನ ಬಾಗಿಲು ಸರಿಯಾಗಿ ಹಾಕದೆ ಅಜಾಗರೂಕತೆಯಿಂದ ಇದ್ದ

ಕಾರಣದಿಂದಾಗಿ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದು ಇಬ್ಬರು ವಿದ್ಯಾರ್ಥಿನಿಯರಾದ ಸಹೋದರಿಯರು ಚರಿಷ್ಮಾ(17) ಮತ್ತು ಚಂದಿಕಾ(15) ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.

ಅಪಘಾತಕ್ಕೆ ಕಾರಣರಾದ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾನೀಡಿದ ದೂರಿನ ಮೇರೆಗೆ ಮಾ.31ರಂದು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಯಾಳು ವಿದ್ಯಾರ್ಥಿನಿಯರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ

Edited By : PublicNext Desk
Kshetra Samachara

Kshetra Samachara

02/04/2026 07:18 pm

Cinque Terre

902

Cinque Terre

0

ಸಂಬಂಧಿತ ಸುದ್ದಿ