ಮಂಗಳೂರು: ನಗರದ ಬಿಜೈ ಯ ಮನೆಯೊಂದರ ಬಾಗಿಲು ಮುರಿದು ಕಳವುಗೈದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾನು ಬೆಂಗಳೂರಿಗೆ ತೆರಳಿದ್ದೆ. ಮಾ.27ರಂದು ನೆರೆಮನೆಯ ಯುಲಾಲಿಯ ಡಿಸೋಜ ಫೋನ್ ಕರೆ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳರು ನುಗ್ಗಿದ್ದಾರೆ ಎಂದು ತಿಳಿಸಿದ್ದರು. ಮಾ.28ರಂದು ತಾನು ವಾಪಸ್ ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳರು ಬಾಗಿಲಿನ ಬೀಗವನ್ನು ಆಯುಧ ಉಪಯೋಗಿಸಿ ತೆರೆದು ಮನೆಯೊಳಗಡೆ ಪ್ರವೇಶಿಸಿದ್ದಾರೆ.
ಬಳಿಕ ಬೆಡ್ ರೂಮಿನಲ್ಲಿದ್ದ ಕಪಾಟನ್ನು ಒಡೆದು ಬೆಲೆಬಾಳುವ ವಸ್ತುಗಳಿಗಾಗಿ ಹುಡುಕಾಡಿ ಕಳ್ಳತನಕ್ಕೆ ಯತ್ನಿಸಿರುವುದು ಕಂಡು ಬಂದಿದೆ ಎಂದು ಬಿಜೈಯ ಲಿತೀಶಿಯಾ ತೌರೋ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/04/2026 03:34 pm
LOADING...