ಶಹಜಹಾನ್‌ಪುರ (ಉತ್ತರ ಪ್ರದೇಶ): ನ್ಯಾಯದಾನ ಮಾಡಬೇಕಾದ ನ್ಯಾಯಾಲಯದ ಆವರಣವೇ ಅಖಾಡವಾಗಿ ಮಾರ್ಪಟ್ಟ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಕೇವಲ ಒಂದು ಕುರ್ಚಿಗಾಗಿ ವಕೀಲರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ನ್ಯಾಯಾಲಯದ ಒಳಗೆ ಕುಳಿತುಕೊಳ್ಳುವ ಸಣ್ಣ ವಿಷಯಕ್ಕೆ ಶುರುವಾದ ಈ ಕಿರಿಕ್, ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಬಿಳಿ ಶರ್ಟ್ ಮತ್ತು ಕಪ್ಪು ಕೋಟ್ ಧರಿಸಿದ್ದ ವಕೀಲರು ಒಬ್ಬರಿಗೊಬ್ಬರು ಗುದ್ದಾಟ, ಒದೆತಗಳಿಂದ ಹಲ್ಲೆ ನಡೆಸಿದ್ದಾರೆ. ಕೈಗೆ ಸಿಕ್ಕ ಕಟ್ಟಿಗೆ ಹಾಗೂ ಪೀಠೋಪಕರಣಗಳಿಂದ ಹೊಡೆದಾಡಿಕೊಂಡಿದ್ದಾರೆ. ಕಿತ್ತಾಟದ ಭರದಲ್ಲಿ ಹಲವರ ಬಟ್ಟೆಗಳು ಹರಿದು ಹೋಗಿದ್ದು, ಕಡತಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಕಾನೂನು ಪಾಲಿಸಬೇಕಾದವರೇ ಕೈಗೆ ಕಾನೂನು ತೆಗೆದುಕೊಂಡ ಈ ಘಟನೆ ವಕೀಲ ವೃತ್ತಿಯ ಘನತೆಗೆ ಕಪ್ಪು ಚುಕ್ಕೆ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
03/04/2026 03:43 pm
LOADING...