ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೀಲ್ಸ್ ಹುಚ್ಚು : ಪೆಟ್ರೋಲ್ ಬಂಕ್‌ನಲ್ಲಿ ಜೀವಕ್ಕೆ ಕುತ್ತು ತಂದ ದುಸ್ಸಾಹಸ.. ಬೈಕ್ ಮೇಲೆ ಪೆಟ್ರೋಲ್ ಸುರಿದು ಹುಚ್ಚಾಟ

ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಕೆಲವರು ಎಂತಹ ಅಪಾಯಕಾರಿ ಕೆಲಸಕ್ಕೂ ಕೈಹಾಕಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಸಾಕ್ಷಿಯಾಗಿದೆ. ಪೆಟ್ರೋಲ್ ಬಂಕ್‌ನಂತಹ ಸೂಕ್ಷ್ಮ ಪ್ರದೇಶದಲ್ಲಿ ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ತನ್ನ ಹಾಗೂ ಸುತ್ತಮುತ್ತಲಿದ್ದವರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ಪೆಟ್ರೋಲ್ ಬಂಕ್‌ನಲ್ಲಿ ತನ್ನ ಬೈಕ್ ನಿಲ್ಲಿಸಿದ್ದಾನೆ. ಪೆಟ್ರೋಲ್ ಹಾಕುವ ಬದಲು, ಬಂಕ್ ಸಿಬ್ಬಂದಿ ಬಳಿಯಿಂದ ಪೆಟ್ರೋಲ್‌ ಗನ್‌ ಪಡೆದು ಬೈಕ್‌ನ ಟ್ಯಾಂಕ್ ಮತ್ತು ಸೀಟಿನ ಮೇಲೆ ಪೆಟ್ರೋಲ್ ಸುರಿದ್ದಿದ್ದಾನೆ. ಕೇವಲ ಒಂದು ಸಣ್ಣ ಕಿಡಿ ತಗುಲಿದರೂ ಇಡೀ ಬಂಕ್ ಸ್ಫೋಟಗೊಳ್ಳುವ ಭೀಕರ ಸಾಧ್ಯತೆ ಇದ್ದರೂ, ಯುವಕ ವಿಡಿಯೋ ಚಿತ್ರೀಕರಣಕ್ಕಾಗಿ ಈ ದುಸ್ಸಾಹಸಕ್ಕೆ ಮುಂದಾಗಿದ್ದಾನೆ.

ಯುವಕನ ಈ ಹುಚ್ಚಾಟದ ಜೊತೆಗೆ, ಆತನಿಗೆ ಸಹಕರಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿಯ ವಿರುದ್ಧವೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಫೋನ್ ಬಳಸುವುದೇ ನಿಷೇಧವಿರುವಾಗ, ಹೀಗೆ ಪೆಟ್ರೋಲ್ ಸುರಿದು ವಿಡಿಯೋ ಮಾಡಲು ಹೇಗೆ ಅನುಮತಿ ನೀಡಲಾಯಿತು?" ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಂಕ್ ಸಿಬ್ಬಂದಿಯ ಈ ನಿರ್ಲಕ್ಷ್ಯ ದೊಡ್ಡ ಮಟ್ಟದ ಅನಾಹುತಕ್ಕೆ ಆಹ್ವಾನ ನೀಡಿದಂತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಕ್ಷಣವೇ ಎಚ್ಚೆತ್ತುಕೊಂಡಿರುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಸಂಬಂಧ ಪೆಟ್ರೋಲ್ ಬಂಕ್ ಆಡಳಿತ ಮಂಡಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

03/04/2026 05:37 pm

Cinque Terre

13.85 K

Cinque Terre

0

ಸಂಬಂಧಿತ ಸುದ್ದಿ