ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ಸೇತುವೆಗಳನ್ನು ಹೇಗೆ ಕೆಡಗ್ತೀವಿ ನೋಡಿ : ಅಮೆರಿಕಾಗೆ ನೇರ ಸವಾಲು ಹಾಕಿದ ಇರಾನ್

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಕರಾಜ್ ಸೇತುವೆಯ ಮೇಲೆ ಯುನೈಟೆಡ್ ಸ್ಟೇಟ್ಸ್ ನಡೆಸಿದ ವಾಯುದಾಳಿಯ ನಂತರ ಪರಿಸ್ಥಿತಿ ಗಂಭೀರ ತಿರುವು ಪಡೆದುಕೊಂಡಿದೆ. ಈ ದಾಳಿಯಲ್ಲಿ ಕನಿಷ್ಠ ಎಂಟು ನಾಗರಿಕರು ಸಾವನ್ನಪ್ಪಿದ್ದು, 95 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಇರಾನ್, ಗಲ್ಫ್ ಪ್ರದೇಶದ ಎಂಟು ಪ್ರಮುಖ ಸೇತುವೆಗಳನ್ನು ಗುರಿಯಾಗಿಸುವ ಎಚ್ಚರಿಕೆ ನೀಡಿದೆ. ಈ ಬೆದರಿಕೆಯಿಂದ ಪ್ರಾದೇಶಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಭೀತಿ ಹೆಚ್ಚಾಗಿದೆ.

ಇರಾನ್ ಮಾಧ್ಯಮಗಳು ಕುವೈತ್, ಯುಎಇ ಮತ್ತು ಜೋರ್ಡಾನ್ ಸೇರಿದಂತೆ ಹಲವು ದೇಶಗಳ ಪ್ರಮುಖ ಸೇತುವೆಗಳ ಪಟ್ಟಿಯನ್ನು ಪ್ರಕಟಿಸಿವೆ. ಈ ಪಟ್ಟಿಯಲ್ಲಿ ಕುವೈತ್‌ನ ಶೇಖ್ ಜಾಬರ್ ಸೇತುವೆ ಹಾಗೂ ಅಬುಧಾಬಿಯ ಪ್ರಮುಖ ಸಂಪರ್ಕ ಸೇತುವೆಗಳು ಗುರಿಯಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಈ ಸೇತುವೆಗಳು ಆಯಾ ದೇಶಗಳ ಆರ್ಥಿಕತೆ ಮತ್ತು ಸಂಚಾರ ವ್ಯವಸ್ಥೆಗೆ ಅತ್ಯಂತ ನಿರ್ಣಾಯಕವಾಗಿವೆ.

ಇರಾನ್ ಇನ್ನೂ ಅಧಿಕೃತವಾಗಿ ದಾಳಿ ಘೋಷಿಸದಿದ್ದರೂ, ಈ ಬೆಳವಣಿಗೆ ಯುದ್ಧದ ವ್ಯಾಪ್ತಿ ಹೆಚ್ಚಾಗುವ ಭೀತಿಯನ್ನು ಹುಟ್ಟುಹಾಕಿದೆ. ಗಲ್ಫ್ ರಾಷ್ಟ್ರಗಳಲ್ಲಿ ಈಗಾಗಲೇ ಭದ್ರತಾ ಎಚ್ಚರಿಕೆಗಳನ್ನು ಜಾರಿಗೊಳಿಸಲಾಗಿದ್ದು, ಜಾಗತಿಕ ಮಟ್ಟದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Edited By :
PublicNext

PublicNext

03/04/2026 04:39 pm

Cinque Terre

10.75 K

Cinque Terre

0