ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ F-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್ ವಾಯುಸೇನೆ - ಪೈಲಟ್‌ಗಳನ್ನು ಹಿಡಿದುಕೊಟ್ಟರೆ ಬಹುಮಾನ!

ಟೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರಿರುವ ಬೆನ್ನಲ್ಲೇ, ಇರಾನ್ ಸೇನೆಯು ಅಮೆರಿಕದ ಅತ್ಯಾಧುನಿಕ F-15 ಸ್ಟ್ರೈಕ್ ಈಗಲ್ (F-15 Strike Eagle) ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದೆ ಎಂದು ವರದಿಯಾಗಿದೆ. ಯುದ್ಧ ಆರಂಭವಾದ ನಂತರ ಶತ್ರು ದೇಶದ ದಾಳಿಗೆ ಅಮೆರಿಕದ ಯುದ್ಧ ವಿಮಾನವೊಂದು ಪತನಗೊಂಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ ಮೂಡಿಸಿದೆ.

ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಜೆಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು 'ಆಕ್ಸಿಯೋಸ್' (Axios) ವರದಿ ಮಾಡಿದೆ. ಈ ಬೆನ್ನಲ್ಲೇ CNN, ರಾಯಿಟರ್ಸ್ ಮತ್ತು ನ್ಯೂಯಾರ್ಕ್ ಟೈಮ್ಸ್ ಸಂಸ್ಥೆಗಳು ಅಮೆರಿಕದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಈ ಸುದ್ದಿಯನ್ನು ಖಚಿತಪಡಿಸಿವೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಕೆಳಕ್ಕೆ ಜಿಗಿದಿರುವ ಸಾಧ್ಯತೆಯಿದ್ದು, ಅವರಿಗಾಗಿ ಅಮೆರಿಕದ ವಿಶೇಷ ಪಡೆಗಳು 'ಸರ್ಚ್ ಆಂಡ್ ರೆಸ್ಕ್ಯೂ' (Search-and-Rescue) ಕಾರ್ಯಾಚರಣೆ ಆರಂಭಿಸಿವೆ.

ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ಗಳಲ್ಲಿ ವಿಮಾನ ಪತನದ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, "ಯಾರಾದರೂ ಅಮೆರಿಕದ ಪೈಲಟ್‌ಗಳನ್ನು ಜೀವಂತವಾಗಿ ಹಿಡಿದು ಒಪ್ಪಿಸಿದರೆ ಅವರಿಗೆ ಸರ್ಕಾರದಿಂದ ಭಾರಿ ಮೊತ್ತದ ಬಹುಮಾನ ನೀಡಲಾಗುವುದು" ಎಂದು ಅಲ್ಲಿನ ಸ್ಥಳೀಯರಿಗೆ ಘೋಷಿಸಲಾಗಿದೆ.

ಇರಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಿಮಾನದ ಅವಶೇಷಗಳು ಮತ್ತು ಪೈಲಟ್‌ಗಳಿಗಾಗಿ ಸ್ಥಳೀಯ ಬುಡಕಟ್ಟು ಜನರು ಶಸ್ತ್ರಸಜ್ಜಿತರಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಮತ್ತೊಂದೆಡೆ, ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ತಮ್ಮ ಸೈನಿಕರನ್ನು ರಕ್ಷಿಸಲು ಇರಾನ್ ಗಡಿಯೊಳಗೆ ಹಾರಾಟ ನಡೆಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Nagaraj Tulugeri
PublicNext

PublicNext

03/04/2026 09:36 pm

Cinque Terre

5.59 K

Cinque Terre

0

ಸಂಬಂಧಿತ ಸುದ್ದಿ