ವಾಷಿಂಗ್ಟನ್/ತೆಹ್ರಾನ್: ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ ಅತ್ಯಾಧುನಿಕ ಎಫ್-15 (F-15) ಯುದ್ಧ ವಿಮಾನ ಪತನಗೊಂಡಿದ್ದು, ನಾಪತ್ತೆಯಾಗಿರುವ ಪೈಲಟ್‌ಗಳ ಪತ್ತೆಗಾಗಿ ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆ ಈಗ ಯುದ್ಧದ ರೂಪ ಪಡೆದಿದೆ.
ನಾಪತ್ತೆಯಾಗಿರುವ ಪೈಲಟ್‌ಗಳನ್ನು ಹುಡುಕಲು ಇರಾನ್‌ನ ದುರ್ಗಮ ಪ್ರದೇಶಗಳಿಗೆ ನುಗ್ಗಿರುವ ಅಮೆರಿಕದ ವಿಶೇಷ ಪಡೆಗಳ ಹೆಲಿಕಾಪ್ಟರ್‌ಗಳ ಮೇಲೆ ಸ್ಥಳೀಯ ಇರಾನಿ ಬುಡಕಟ್ಟು ಜನಾಂಗದವರು ದಾಳಿ ನಡೆಸುತ್ತಿದ್ದಾರೆ. ಪೈಲಟ್‌ಗಳಿಗಾಗಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್‌ಗಳನ್ನು ಗುರಿಯಾಗಿಸಿಕೊಂಡು ಸ್ಥಳೀಯರು ಗುಂಡಿನ ದಾಳಿ ನಡೆಸುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಹಿನ್ನಡೆಯಾಗಿದೆ.
ವಿಮಾನ ಪತನಗೊಂಡ ನಂತರ ಪೈಲಟ್‌ಗಳು ಪ್ಯಾರಾಶೂಟ್ ಮೂಲಕ ಜಿಗಿದಿದ್ದಾರೆಯೇ ಅಥವಾ ವಿಮಾನದ ಒಳಗೇ ಸಿಲುಕಿದ್ದಾರೆಯೇ ಎಂಬುದು ಇನ್ನು ಖಚಿತವಾಗಿಲ್ಲ. ಒಂದು ವೇಳೆ ಅವರು ಜೀವಂತವಾಗಿದ್ದರೆ, ಅವರನ್ನು ಇರಾನ್ ಪಡೆಗಳು ಅಥವಾ ಸ್ಥಳೀಯರು ಸೆರೆಹಿಡಿಯುವ ಸಾಧ್ಯತೆ ಇರುವುದರಿಂದ ಅಮೆರಿಕ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಈ ಘಟನೆಯಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ತನ್ನ ಪೈಲಟ್‌ಗಳನ್ನು ರಕ್ಷಿಸಲು ಅಮೆರಿಕ ಯಾವುದೇ ಹಂತದ ದಾಳಿಗೂ ಮುಂದಾಗಬಹುದು ಎಂಬ ಮುನ್ಸೂಚನೆ ಲಭ್ಯವಾಗಿದೆ.
PublicNext
03/04/2026 10:27 pm