ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಚಲಿಸುತ್ತಿದ್ದ ರೈಲಿನ ಮುಂದೆ ವ್ಯಕ್ತಿಯನ್ನು ತಳ್ಳಿ ಕೊಲೆ ಯತ್ನ..!

ಅಮೆರಿಕದ ಸಿಯಾಟಲ್‌ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ರೈಲ್ವೇ ನಿಲ್ದಾಣದಲ್ಲಿ ರೈಲು ಬರುತ್ತಿದ್ದ ಸಮಯದಲ್ಲಿಯೇ ಅಪರಿಚಿತ ವ್ಯಕ್ತಿಯೊಬ್ಬನನ್ನು ಹಳಿಗಳ ಮೇಲೆ ತಳ್ಳಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಟ್ರೋ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಈ ದಾಳಿ ನಡೆದಿದೆ. ಆರೋಪಿ ಮತ್ತು ಸಂತ್ರಸ್ತನ ನಡುವೆ ಯಾವುದೇ ಪೂರ್ವ ಪರಿಚಯ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರೈಲು ವೇಗವಾಗಿ ಪ್ಲಾಟ್‌ಫಾರ್ಮ್ ಕಡೆಗೆ ಬರುತ್ತಿದ್ದಾಗ, ಆರೋಪಿ ದಿಢೀರನೆ ಸಂತ್ರಸ್ತನನ್ನು ಹಳಿಗೆ ತಳ್ಳಲು ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್, ಸಂತ್ರಸ್ತ ವ್ಯಕ್ತಿಯು ಸಮಯಪ್ರಜ್ಞೆಯಿಂದ ಹಾಗೂ ಅಲ್ಲಿನ ಇತರ ಪ್ರಯಾಣಿಕರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Nagaraj Tulugeri
PublicNext

PublicNext

03/04/2026 09:40 pm

Cinque Terre

12.23 K

Cinque Terre

0

ಸಂಬಂಧಿತ ಸುದ್ದಿ