ಉಡುಪಿ : ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದ ಯಕ್ಷಗಾನ ಸೇವೆಯ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಈಗ ವಿವಾದಕ್ಕೆ ಕಾರಣವಾಗಿದೆ.
ರಂಗಸ್ಥಳದಲ್ಲಿ ಅಬ್ಬರಿಸುವ ವೇಳೆ ಪಾತ್ರಧಾರಿ ರಂಗಮಂಟಪದ ಕಂಬಕ್ಕೆ ಜೋರಾಗಿ ತಲೆಯನ್ನು ಗುದ್ದಿದ್ದು, ಈ ದೃಶ್ಯವನ್ನು ಕಂಡು ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.
ಕೆಲವರು ಇದು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದರೆ, ಇನ್ನು ಕೆಲವರು ಇದು ಕಲೆಗೆ ನೀಡುವ ಗೌರವವಲ್ಲ. ಕಲಾವಿದರ ಇಂತಹ ವರ್ತನೆ ಮಿತಿ ಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
04/04/2026 08:25 am
LOADING...