ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ ಕ್ರಿಕೆಟ್ ಬೆಟ್ಟಿಂಗ್‌ ನಿರತನ ಬಂಧನ : ಪ್ರಮುಖ ಆರೋಪಿಗಾಗಿ ಶೋಧ

ಕೋಟ: ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಅವ್ಯವಹಾರದಲ್ಲಿ ತೊಡಗಿದ್ದ ಆರೋಪಿಯನ್ನು ಕೋಟ ಪೊಲೀಸರು ಮಣೂರು ಬಾಳೆಬೆಟ್ಟಿನಲ್ಲಿ ಬಂಧಿಸಿದ್ದಾರೆ.

ಬೇಳೂರು ನಿವಾಸಿ ಆದಿತ್ಯ ಶೆಟ್ಟಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಕೋಟ ಠಾಣೆಯ ಕ್ರೈಂ ವಿಭಾಗದ ಉಪನಿರೀಕ್ಷಕ ಮಹಾಂತೇಶ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಈ ಸಂದರ್ಭ ಐ.ಪಿ.ಎಲ್. ನಲ್ಲಿ ಕೆ.ಕೆ.ಆರ್. ಮತ್ತು ಎಸ್.ಎಚ್.ಆರ್. ತಂಡಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಬಾಜಿ ಕಟ್ಟುತ್ತಿರುವುದು ದೃಢಪಟ್ಟಿದೆ. ಈ ಅಕ್ರಮ ಚಟುವಟಿಕೆಯಲ್ಲಿ ಸಂದೀಪ್ ನೂಜಿ ಕೂಡ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡ ಆರೋಪಿ ಸಂದೀಪ್ ಗಾಗಿ ಶೋಧ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/04/2026 10:29 am

Cinque Terre

264

Cinque Terre

0