ಬ್ರಹ್ಮಾವರ : ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಾವರ ಇಲ್ಲಿ ಎಪ್ರಿಲ್ 9 ರಂದು ಜರುಗುವ ರಥೋತ್ಸವ ಅಂಗವಾಗಿ ಶುಕ್ರವಾರ ಹಸಿರು ಹೊರೆ ಕಾಣಿಕೆ ಮೆರವಣಿಗೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಹೊರಟು ರಥ ಬೀದಿ ಮೂಲಕ ದೇವಸ್ಥಾನಕ್ಕೆ ಸಾಗಿ ಬಂತು. ಬ್ರಹ್ಮಾವರ ಟ್ಯಾಕ್ಸಿ ಚಾಲಕರು ಮಾಲೀಕರ ಸಂಘದ ಸದಸ್ಯರು, ಮತ್ತು ಸಾರ್ವಜನಿಕ ಸಂಘ ಸಂಸ್ಥೆಯವರಿಂದ ಸಂಗ್ರಹವಾದ ಹಸಿರುಹೊರೆ ಕಾಣಿಕೆಯನ್ನು ಹಲವಾರು ವಾಹನಗಳ ಮೆರವಣಿಗೆಯಲ್ಲಿ ಚಂಡೆ ಬಳಗ, ಕುಣಿತ ಭಜನಾ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತ್ತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ. ಸದಸ್ಯರಾದ ವಿಜಯ ನಾಯರಿ, ಶೇಖರ ದೇವಾಡಿಗ, ಪದ್ಮನಾಭ ಕಾಂಚನ್ ಉಮೇಶ್ ಪೂಜಾರಿ, ಯಜಮಾನ ಅನಂತ ಪದ್ಮನಾಭ ವಾರಂಬಳ್ಳಿ, ಸರಸ್ವತಿ ನಾಯ್ಕ್ , ಚಂದ್ರ ಶೇಖರ ನಾಯ್ಕ್, ಇಂದಿರಾವತಿ ವಾರಂಬಳ್ಳಿ ಇನ್ನಿತರು ಮೆರವಣಿಗೆಯಲ್ಲಿದ್ದರು.
PublicNext
04/04/2026 03:46 pm
LOADING...