ಬೆಳ್ತಂಗಡಿ: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕಾಡಂಡ ಪರಿಸರದಲ್ಲಿ ಒಂಟಿ ಸಲಗವೊಂದು ಕೃಷಿ ತೋಟಗಳಿಗೆ ದಾಳಿ ಮಾಡಿ ಅಪಾರ ಹಾನಿ ಉಂಟುಮಾಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಇಲ್ಲಿನ ಕಾಡಂಡ ಪರಿಸರದ ಪ್ರಶಾಂತ್ ಹಾಗೂ ಮುತ್ತಪ್ಪ ಎಂಬವರ ತೋಟಗಳಿಗೆ ಈ ಒಂಟಿ ಸಲಗ ನುಗ್ಗಿದೆ. ಈ ವೇಳೆ ಈ ಕಾಡಾನೆಯು ನೀರಾವರಿ ಪೈಪ್ ಲೈನ್, ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, 50ಕ್ಕೂ ಅಧಿಕ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ. ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
PublicNext
04/04/2026 03:51 pm
LOADING...