ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತ್ರೆಯಲ್ಲಿ ಮುರಿದು ಬಿದ್ದ 60 ಅಡಿ ಎತ್ತರದ ದೈತ್ಯ ತೊಟ್ಟಿಲು! - 30ಕ್ಕೂ ಹೆಚ್ಚು ಜನರಿಗೆ ಗಾಯ

​ಕುಶಿನಗರ (ಉತ್ತರ ಪ್ರದೇಶ): ಇಲ್ಲಿನ ಭೈಸಹಾ ಮೇಳದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಮಾರು 60 ಅಡಿ ಎತ್ತರದ ದೈತ್ಯ ತೊಟ್ಟಿಲು (Swing Ride) ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

​ಬುಧವಾರ ರಾತ್ರಿ ಮೇಳದಲ್ಲಿ ಜನದಟ್ಟಣೆ ಹೆಚ್ಚಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಸುಮಾರು 60 ಅಡಿ ಎತ್ತರವಿದ್ದ ಈ ದೈತ್ಯ ತೊಟ್ಟಿಲಿನಲ್ಲಿ ಘಟನೆಯ ಸಮಯದಲ್ಲಿ ಸುಮಾರು 70ರಿಂದ 80 ಜನರಿದ್ದರು ಎನ್ನಲಾಗಿದೆ. ತೊಟ್ಟಿಲು ಕೇವಲ ಎರಡು ಸುತ್ತುಗಳನ್ನು ಪೂರೈಸಿದ ಬೆನ್ನಲ್ಲೇ ತಾಂತ್ರಿಕ ದೋಷದಿಂದಾಗಿ ಹಠಾತ್ತನೆ ಕುಸಿದು ಬಿದ್ದಿದೆ. ​ಕೆಳಗೆ ಬಿದ್ದ ರಭಸಕ್ಕೆ ಅನೇಕರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

​​ಮೇಳಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಇಂತಹ ಅವಘಡಗಳಿಗೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತೊಟ್ಟಿಲಿಗೆ ಏರಿಸಲಾಗಿತ್ತು ಎಂಬ ಆರೋಪಗಳೂ ಕೇಳಿಬರುತ್ತಿವೆ.

​ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಮೇಳದ ಆಯೋಜಕರು ಮತ್ತು ತೊಟ್ಟಿಲು ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Edited By : Vijay Kumar
PublicNext

PublicNext

04/04/2026 06:14 pm

Cinque Terre

6.27 K

Cinque Terre

0